ಐಪಿಎಲ್: ಡೆಲ್ಲಿ ಗೆಲುವಿಗೆ 175 ರನ್ ಗುರಿ ನೀಡಿದ ಆರ್‌ಸಿಬಿ
ವಿರಾಟ್ ಕೊಹ್ಲಿ ಅರ್ಧಶತಕ
Update: 2023-04-15 17:32 IST
ಬೆಂಗಳೂರು, ಎ.15: ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು.
ಶನಿವಾರ ಐಪಿಎಲ್‌ನ 20ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಕೊಹ್ಲಿ(50 ರನ್, 34 ಎಸೆತ, 6 ಬೌಂಡರಿ, 1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಮಹಿಪಾಲ್ ಲೊಮ್ರೋರ್(26 ರನ್ 18 ಎಸೆತ), ಗ್ಲೆನ್ ಮ್ಯಾಕ್ಸ್‌ವೆಲ್(24 ರನ್, 14 ಎಸೆತ), ಎಫ್‌ಡು ಪ್ಲೆಸಿಸ್(22 ರನ್, 16 ಎಸೆತ) ಹಾಗೂ ಶಹಬಾಝ್ ಅಹ್ಮದ್(ಔಟಾಗದೆ 20 ರನ್, 12 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಡೆಲ್ಲಿ ಪರ ಮಿಚೆಲ್ ಮಾರ್ಷ್(2-18) ಹಾಗೂ ಕುಲದೀಪ್ ಯಾದವ್(2-23)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.