×
Ad

ಉಡುಪಿ: ಶತಾಯುಷಿ ಮತದಾರರ ಮನೆಗೆ ತೆರಳಿ ಮತದಾನಕ್ಕೆ ಆಹ್ವಾನ

Update: 2023-04-15 19:13 IST

ಉಡುಪಿ, ಎ.15: ಉಡುಪಿ ತಾಲೂಕು ಪಂಚಾಯತ್ ಮತ್ತು ಉಡುಪಿ ನಗರಸಭಾ ವ್ಯಾಪ್ತಿಯ  ಶತಾಯುಷಿ ಮತದಾರರಿಗೆ  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆ ಯನ್ನು ಅವರುಗಳ  ಮನೆ ಬಾಗಿಲಿಗೆ ತೆರಳಿ  ತಾಲೂಕು ಪಂಚಾಯತಿನ  ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಡುಪಿ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ವಿಜಯಾ ಇವರು ನೀಡಿದ್ದಾರೆ. 

ಶತಾಯುಷಿ ಮತದಾರರಾದ ದೊಡ್ಡಣಗುಡ್ಡೆಯ ಲಿಯೋನೋ ರೊಡ್ರಿಗಸ್, ನಿಟ್ಟೂರು ಕರಂಬಳ್ಳಿಯ ಲಕ್ಷ್ಮಿ, ಕೊಡವೂರಿನ ರಾಧಾ ಹೆಗ್ಡೆ,  ಒಳಕಾಡಿನ ರಾಮದಾಸ್ ಕಾಮತ್ ಹಾಗೂ ಕುತ್ಪಾಡಿಯ ಮೇರಿ ದಾಂತಿ ಹೀಗೆ ಅಧಿಕಾರಿಗಳಿಂದ ಆಹ್ವಾನ ಪಡೆದ ಐವರು  ಶತಾಯುಷಿ ಮತದಾರ ರಾಗಿದ್ದಾರೆ.  

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೀಣಾ ವಿವೇಕಾನಂದ, ತಾಪಂನ ವ್ಯವಸ್ಥಾಪಕ ಸುರೇಶ್, ಸಿಬ್ಬಂದಿ ಚಂದ್ರನಾಯ್ಕ್,  ಕಾಪು ತಾಲೂಕು ಚುನಾವಣಾ ಶಾಖಾ ಸಿಬ್ಬಂದಿಗಳು ಮತ್ತು  ಮತಗಟ್ಟೆ ಅಧಿಕಾರಿ(ಬಿಎಲ್‌ಓ)ಗಳು ಕಾರ್ಯ ನಿರ್ವಹಣಾಧಿಕಾರಿ ಅವರ   ಜೊತೆಯ ಲ್ಲಿದ್ದು ಮತದಾನಕ್ಕೆ ಆಹ್ವಾನಿಸಿದರು.

Similar News