×
Ad

ಮಂಗಳೂರು: ಕೋರಿಯರ್ ಕಂಪೆನಿ ಹೆಸರಿನಲ್ಲಿ ವಂಚನೆ; ದೂರು

Update: 2023-04-18 21:11 IST

ಮಂಗಳೂರು, ಎ.18: ಕೋರಿಯರ್ ಕಂಪೆನಿಯವನೆಂದು ನಂಬಿಸಿದ ಅಪರಿಚಿತನೊಬ್ಬ ವ್ಯಕ್ತಿಗೆ ಲಿಂಕ್ ಕಳುಹಿಸಿ 72,444 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರು ಪಾರ್ಸೆಲ್‌ಗಾಗಿ ಗೂಗಲ್‌ನಲ್ಲಿ ಕೋರಿಯರ್ ಕಂಪೆನಿಯೊಂದರ ಬಗ್ಗೆ ಮಾಹಿತಿ ಹುಡುಕಾಡುತ್ತಿ ದ್ದಾಗ ಅವರಿಗೆ 9827698553 ಮೊಬೈಲ್ ಸಂಖ್ಯೆ ದೊರೆತಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ಆತ ಕೊರಿಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಲಿಂಕ್‌ವೊಂದನ್ನು ಕಳುಹಿಸಿದ. ಬಳಿಕ ಗೂಗಲ್ ಪೇನಲ್ಲಿ 5 ರೂ. ಕಳುಹಿಸುವಂತೆ ತಿಳಿಸಿದ. ದೂರುದಾರ ವ್ಯಕ್ತಿ ಹಣ ಪಾವತಿಸಿದರೂ ಪಾರ್ಸೆಲ್ ಕೊಂಡು ಹೋಗಲು ಯಾರೂ ಬಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎ.15ರಂದು ದೂರುದಾರರ ಬ್ಯಾಂಕ್ ಖಾತೆಗೆ ಪರ್ಸನಲ್ ಲೋನ್ ಮಂಜೂರಾದ ಸಂದೇಶ ಬಂದಿತ್ತು. ಅವರು ಖಾತೆಯನ್ನು ಪರಿಶೀಲಿಸಿದಾಗ 72,444 ರೂ. ಕಡಿತಗೊಂಡಿರುವುದು ಗಮನಕ್ಕೆ ಬಂದಿತ್ತು. ಕೊರಿಯರ್ ಕಂಪೆನಿಯವನೆಂದು ಪರಿಚಯಿಸಿಕೊಂಡ ವ್ಯಕ್ತಿ ಕಳುಹಿಸಿದ ಲಿಂಕ್‌ಗೆ ಬ್ಯಾಂಕ್‌ನ ವಿವರ ನೀಡಿದ್ದರಿಂದ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News