×
Ad

ಮಂಗಳೂರು: ಕ್ರೆಡಿಟ್ ಕಾರ್ಡ್‌ ಆ್ಯಕ್ಟಿವೇಷನ್ ಮಾಡುವುದಾಗಿ ವಂಚನೆ

Update: 2023-04-19 21:34 IST

ಮಂಗಳೂರು, ಎ.19: ಹೊಸ ಕ್ರೆಡಿಟ್ ಕಾರ್ಡ್‌ನ ಆ್ಯಕ್ಟಿವೇಷನ್ ಮಾಡುವುದಾಗಿ ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 2.47 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಬ್ಯಾಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಮಾ.31ರಂದು ಮಧ್ಯಾಹ್ನ ಮೊ.ಸಂ: 8274849531ರಿಂದ ತನಗೆ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ಬ್ಯಾಂಕ್ ಆಫ್ ಬರೋಡಾದಿಂದ ಮಾತನಾಡುತ್ತಿರುವುದಾಗಿ ತಿಳಿಸಿದ ವ್ಯಕ್ತಿಯು ಹೊಸ ಕ್ರೆಡಿಟ್ ಕಾರ್ಡ್ ಆ್ಯಕ್ಟಿವೇಷನ್ ಮಾಡಬೇಕಾಗಿದ್ದು ಅದರ ನಂಬರ್ ಹೇಳುವಂತೆ ಸೂಚಿಸಿದ. ಅದನ್ನು ನಂಬಿದ ತಾನು ಹೊಸ ಕಾರ್ಡ್‌ನ ನಂಬರ್ ಹಾಗೂ ತನ್ನ ಮೊಬೈಲ್‌ಗೆ ಬಂದಿರುವ ಒಟಿಪಿ ವಿವರ ತಿಳಿಸಿದೆ. ಅರ್ಧಗಂಟೆಯ ಬಳಿಕ ತನ್ನ ಕ್ರೆಡಿಟ್ ಕಾರ್ಡ್ ಸಂಖ್ಯೆಯಿಂದ 1,99,999 ಹಾಗೂ 48,000 ರೂ. ಕಡಿತ ಆಗಿರುವ ಸಂದೇಶ ಬಂದಿದೆ. ಈ ಬಗ್ಗೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಯಾರೋ ಅಪರಿಚಿತರು ಕರೆ ಮಾಡಿ 2,47,999 ರೂ. ವರ್ಗಾಯಿಸಿ ವಂಚಿಸಿರುವುದು ಗೊತ್ತಾಗಿದೆ ಎಂದು ಫಿರ್ಯಾದಿದಾರರು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Similar News