×
Ad

ಪುತ್ತೂರು: ಶಾಸಕರ ತವರು ಗ್ರಾಮದಲ್ಲೇ ಚುನಾವಣಾ ಬಹಿಷ್ಕಾರದ ಬ್ಯಾನರ್

Update: 2023-04-19 21:38 IST

ಉಪ್ಪಿನಂಗಡಿ: ನಮಗೆ ಯಾವುದೇ ಮೂಲಭೂತ ಸೌಕರ್ಯ ದೊರೆತ್ತಿಲ್ಲವೆಂದು ಆರೋಪಿಸಿ ಬೋಳಮೆ, ನಡುಗುಡ್ಡೆ ಹಾಗೂ ಗುಂಡಿಗದ್ದೆ ನಿವಾಸಿಗಳು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಘಟನೆ ಶಾಸಕರ ತವರು ಗ್ರಾಮವಾದ ಹಿರೇಬಂಡಾಡಿಯಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಬೋಳಮೆ, ನಡುಗುಡ್ಡೆ ಹಾಗೂ ಗುಂಡಿಗದ್ದೆಯಲ್ಲಿ ಸುಮಾರು 13 ಮನೆಗಳಿದ್ದು, ಈ ಮನೆಗಳಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಳೆದ ಆಡಳಿತ ಪಕ್ಷಗಳು ಮತ್ತು ಗ್ರಾಮ ಪಂಚಾಯತ್ ಕೊಡದ ಕಾರಣ ನಾವು ಈ ಸಲ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಬ್ಯಾನರ್‍ನಲ್ಲಿ ಬರೆದು ಇಲ್ಲಿನ ನಿವಾಸಿಗಳು ಅಳವಡಿಸಿದ್ದಾರೆ.

Similar News