×
Ad

ಕಾಪು: ಜೆಡಿಎಸ್ ಅಭ್ಯರ್ಥಿ ಸಬೀನಾ ಸಮದ್ ನಾಮಪತ್ರ ಸಲ್ಲಿಕೆ

Update: 2023-04-19 21:54 IST

ಕಾಪು : ಕಾಪು ವಿಧಾನ ಸಭಾ ಕ್ಷೇತ್ರದ  ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿಯಾಗಿ ಸಬೀನಾ ಸಮದ್ ಬುಧವಾರ ಕಾಪು ತಾಲೂಕು ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಪಿ.ಕೆ. ಬಿನೋಯ್ ನಂಬಿಯಾರ್ ಅವರಿಗೆ ಸಬೀನಾ ಸಮದ್ ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಸುಧಾಕರ ಶೆಟ್ಟಿ ಹೆಜಮಾಡಿ, ಜಯರಾಮ್ ಆಚಾರ್ಯ ಅವರೊಂದಿಗೆ ಆಡಳಿತ ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಇದ್ದರು. 

ಇದಕ್ಕೂ ಮುನ್ನ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು, ಉಚ್ಚಿಲ ಚರ್ಚ್,  ಕಾಪು ಮಸೀದಿ ಮತ್ತು ದರ್ಗಾ ಕ್ಕೆ ಭೇಟಿ ನೀಡಿ ಪ್ರಾರ್ಥನೆ  ಸಲ್ಲಿಸಿದರು. 

ದೆಹಲಿಯಲ್ಲಿ ಉದ್ಯಮಿಯಾಗಿರುವ ಸಬೀನಾ ಸಮದ್, ಮೂಲತಃ ಕಾಪು ಸಮೀಪದ ಮಲ್ಲಾರು ಕೊಂಬಗುಡ್ಡೆಯ ನಿವಾಸಿಯಾಗಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡು ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದ್ದು, ಬುಧವಾರ ನೂರಾರು ಪಕ್ಷದ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಲು ಕಾಪು ತಾಲ್ಲೂಕು ಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಬೀನಾ ಸಮದ್, ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡ ಹಾಗು ಎಚ್.ಡಿ ಕುಮಾರ ಸ್ವಾಮಿಯವರು ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರೊಂದಿಗೆ ಸೇರಿಕೊಂಡು ನಾವು ಮತಯಾಚಿಸಲಿದ್ದೇವೆ. ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಡುದಾಗಿ ಹೇಳಿದರು.

ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಜೆಡಿಎಸ್ ಚುನಾವಣಾ ಪೂರ್ವದಲ್ಲೇ ನಡೆಸಿದ ಜನತಾ ಪರ್ವ ಕಾರ್ಯಕ್ರಮದಡಿಯಲ್ಲಿ ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ಯೋಜನೆಗಳಿಗೆ ಉತ್ತಮ ಜನಸ್ಪಂಧನೆ ದೊರಕಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯವು ಹಲವಾರು ಜನಪರ ಕಾರ್ಯಕ್ರಮಗಳ ಮೂಲಕವಾಗಿ ಪ್ರಗತಿ ಕಂಡಿದ್ದು ಈ ಜನಪರ ಕಾರ್ಯಗಳೇ ಕಾಪು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಬೀನಾ ಸಮದ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ.

ಜೆಡಿಎಸ್ ಕಾರ್ಯಾಧ್ಯಕ್ಷ ವಾಸುದೇವ ರಾವ್, ರಾಜ್ಯ ಕಾರ್ಯದರ್ಶಿ ಸುಧಾಕರ್ ಶೆಟ್ಟಿ, ದಕ್ಷಿಣ ಬ್ಲಾಕ್ ಅಧ್ಯಕ್ಷ ಭರತ್ ಶೆಟ್ಟಿ, ಉತ್ತರ ಬ್ಲಾಕ್ ಇಕ್ಭಾಲ್ ಆತ್ರಾಡಿ, ಪಕ್ಷದ ಮುಖಂಡರಾದ ಜಯ ಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಸಂಜಯ್, ಉಮೇಶ್ ಕರ್ಕೇರ, ವೆಂಕಟೇಶ್ ಎಂ.ಟಿ, ಚಂದ್ರಹಾಸ ಎರ್ಮಾಳ್, ಇಬ್ರಾಹಿಂ ಉಚ್ಚಿಲ, ರಝಾಕ್ ಕರೀಂ, ಫೈಝನ್, ಅಶ್ರಫ್ ಪಡುಬಿದ್ರಿ, ಬಿ.ಕೆ. ಮುಹಮ್ಮದ್, ಜಯಶ್ರೀ, ಇಮ್ತಿಯಾಝ್, ರಫೀಕ್ ಉಚ್ಚಿಲ, ರಶೀದ್ ಕಟಪಾಡಿ ಉಪಸ್ಥಿತರಿದ್ದರು.

Similar News