×
Ad

ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ನಾಮಪತ್ರ ಸಲ್ಲಿಕೆ

Update: 2023-04-20 21:03 IST

ಬೈಂದೂರು, ಎ.20: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಗುರುವಾರ ಬೈಂದೂರಿನ ಮಿನಿ ವಿಧಾನಸೌಧದಲ್ಲಿ ರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಹೆಸರು ಘೋಷಣೆ ಮಾಡಿದಾಗ ಎರಡೆರಡು ಆತಂಕವಿತ್ತು. ಜನ ಸ್ವೀಕರಿಸುವರೇ? ಇನ್ನೊಂದು ಸಂಘಟನೆ ಕಟ್ಟಬೇಕು. ಈ ಎಲ್ಲ ಆತಂಕ ದೂರವಾಗಿದೆ. ಗೆಲ್ಲಲು ಹಣವೇ ಬೇಕಿಲ್ಲ. ಜನರ ಪ್ರೀತಿಯೇ ಸಾಕು. ಎಲ್ಲ 39 ಗ್ರಾಪಂಗಳಿಗೆ ಹೋಗಿ ಬಂದೆ. ಇಲ್ಲಿ ಸೇರಿರುವ ಜನ ನೋಡಿದರೆ, ಕಾರ್ಯಕರ್ತರು, ಜನ ನನ್ನನ್ನು ಒಪ್ಪಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಕ್ಷದ ನಾಯಕಿ, ನಟಿ ಶ್ರುತಿ, ಬೈಂದೂರು ಉಸ್ತುವಾರಿ ಕ್ಯಾ.ಬ್ರಿಜೇಶ್ ಚೌಟ, ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ ಉಪಸ್ಥಿತರಿದ್ದರು.

Similar News