ಬಂಟ್ವಾಳ: ಅಕ್ರಮ ಗೋ ಸಾಗಾಟ; ಆರೋಪಿ ಪ್ರದೀಪ್ ಸಿಕ್ವೇರ ಬಂಧನ
Update: 2023-04-20 21:30 IST
ಬಂಟ್ವಾಳ: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಖಚಿತ ಮಾಹಿತಿಯನ್ವಯ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಕಾರಾಜೆ ನಿವಾಸಿ ಪ್ರದೀಪ್ ಸಿಕ್ವೇರ ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಿಕಪ್ ನಲ್ಲಿ ಎರಡು ಜಾನುವಾರುಗಳನ್ನು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಬಿ.ಸಿ.ರೋಡ್ ನ ನಾರಾಯಣಗುರು ವೃತ್ತದ ಸಮೀಪ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ವಿಶೇಷ ಪತ್ತೆ ತಂಡ ಕಾರ್ಯಾಚರಣೆ ನಡೆಸಿದೆ.
ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಸೂಚನೆಯಂತೆ ಉಪ ನಿರೀಕ್ಷಕರಾದ ರಾಮಕೃಷ್ಣ, ಎಚ್.ಸಿ.ಗಳಾದ ಮನೋಹರ, ಜಯಕುಮಾರ್, ಪಿ.ಸಿ.ಗಳಾದ ಝಮೀರ್ ಮತ್ತು ರಂಗನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.