×
Ad

ಭಯೋತ್ಪಾದಕ ಸಂಘಟನೆಗೆ ಧನ ಸಹಾಯ: ಲಂಡನ್ ನಲ್ಲಿ ಭಾರತದ ಪ್ರಜೆಯ ಬಂಧನ

Update: 2023-04-20 23:07 IST

ಲಂಡನ್, ಎ.20: ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾಗೆ ಧನಸಹಾಯ ಒದಗಿಸಿದ ಶಂಕೆಯಲ್ಲಿ 66 ವರ್ಷದ ಭಾರತೀಯ ಪ್ರಜೆ ಸುಂದರ್ ನಾಗರಾಜನ್ ಎಂಬವರನ್ನು ಲಂಡನ್ ನಲ್ಲಿ ಬಂಧಿಸಿದ್ದು ಈತನನ್ನು ಅಮೆರಿಕಕ್ಕೆ ಗಡೀಪಾರು ಮಾಡಲು ನಿರ್ಧರಿಸಿರುವುದಾಗಿ ಬ್ರಿಟನ್ ಪೊಲೀಸರು ಹೇಳಿದ್ದಾರೆ.  

ಭಯೋತ್ಪಾದಕ ಸಂಘಟನೆಗೆ ಆರ್ಥಿಕ ನೆರವು ಒದಗಿಸುವುದರ ವಿರುದ್ಧ ಬ್ರಿಟನ್ ಮತ್ತು ಲಂಡನ್ ನಡೆಸುತ್ತಿರುವ  ಸಂಘಟಿತ ಕ್ರಮದ ಭಾಗವಾಗಿ ಬ್ರಿಟನ್ ಪೊಲೀಸರು  ನಜೀಮ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದರು. 

ಈತ ವಜ್ರವ್ಯಾಪಾರಿಯಾಗಿದ್ದು ಹಿಜ್ಬುಲ್ಲಾ ಸಂಘಟನೆಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಆರೋಪವಿದೆ. ಅಹ್ಮದ್ ನ ಲೆಕ್ಕಪತ್ರ ವ್ಯವಹಾರ ನೋಡಿಕೊಳ್ಳುತ್ತಿದ್ದ ಸುಂದರ್ ನಾಗರಾಜನ್ನ ಬಂಧನಕ್ಕೆ ಬ್ರಿಟನ್ ಪೊಲೀಸರು ವಾರಂಟ್ ಜಾರಿಗೊಳಿಸಿದ ಬಳಿಕ ಪಶ್ಚಿಮ ಲಂಡನ್ ನಲ್ಲಿ ಈತನನ್ನು ವಶಕ್ಕೆ ಪಡೆದು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿದ ವರದಿ ಹೇಳಿದೆ. 

Similar News