ಭಾರತಕ್ಕೆ ಭೇಟಿ ನೀಡಲಿರುವ ಪಾಕ್ ಸಚಿವ ಬಿಲಾವಲ್ ಭುಟ್ಟೊ
Update: 2023-04-20 23:23 IST
ಇಸ್ಲಮಾಬಾದ್, ಎ.20: ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ)ಯ ವಿದೇಶಾಂಗ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಪಾಲ್ಗೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಘೋಷಿಸಿದೆ.
ಮೇ 4 ಮತ್ತು 5ರಂದು ಗೋವಾದಲ್ಲಿ ನಡೆಯಲಿರುವ ಎಸ್ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಪಾಕಿಸ್ತಾನದ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವ ಭುಟ್ಟೊ ವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಝ್ ಝಹಾರ ಬಲೋಚ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
2014ರಲ್ಲಿ ನವಾಝ್ ಶರೀಫ್ ಭೇಟಿಯ ಬಳಿಕ ಪಾಕ್ ಮುಖಂಡರೊಬ್ಬರು ಭಾರತಕ್ಕೆ ನೀಡುವ ಪ್ರಥಮ ಅಧಿಕೃತ ಭೇಟಿ ಇದಾಗಲಿದೆ.