×
Ad

ದ್ವಿತೀಯ ಪಿಯುಸಿ ಪರೀಕ್ಷೆ: ಹೂಡೆ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ

Update: 2023-04-21 14:31 IST

ಉಡುಪಿ,ಎ.21: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಹಾಗು ವಾಣಿಜ್ಯ ವಿಭಾಗ ಶೇ100 ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ 6 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ, 8 ವಿಧ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ತುಬಾ ಫಾತಿಮ 575(ಶೇ.95.83) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಉಳಿದಂತೆ ಆಯಿಷಾ ಸಫ್ರೀನ್ 563 (ಶೇ.93.83), ಐಫಾ ಸಿಂಬ್ಲ 557(ಶೇ.92.83), ರೆಹಾ ತಬಸ್ಸುಮ್ 550 (ಶೇ.91.66), ಹಫ್ಸಾ 516(ಶೇ.85.66), ಆಯಿಷಾ ಮೆಹ್ವಿಶ್ 510(ಶೇ.85) ಅಂಕಗಳನ್ನು ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 6 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ, 14 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಲಾರೈಬ್ 575(ಶೇ.95.83) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾರೆ. ಇಫ್ಫಾತ್ 572(ಶೇ.95.33), ಅನ್ಶಾಝ್ ಝುಹಾ 563(ಶೇ.93.83), ಸಾರಾ ಝುಹಾ 539(ಶೇ.89.83), ನೂರೀ ಅಲಿಯಾ 516(ಶೇ.86), ಇಶಾ ಫಾತಿಮಾ 514(ಶೇ.85.66) ಅಂಕಗಳನ್ನು ಗಳಿಸಿದ್ದಾರೆ. ಈ ಉತ್ತಮ ಫಲಿತಾಂಶಕ್ಕಾಗಿ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕ ವೃಂದವನ್ನು ಅಭಿನಂಧಿಸಿದೆ.

Similar News