×
Ad

ಪಿಯುಸಿ ಪರೀಕ್ಷೆ: ಕೊರಗ ವಿದ್ಯಾರ್ಥಿನಿಯರಿಬ್ಬರ ಸಾಧನೆ

Update: 2023-04-21 19:14 IST

ಕುಂದಾಪುರ, ಎ.21: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಕೊರಗ ಸಮುದಾಯದ ವಿದ್ಯಾರ್ಥಿನಿಯರಿಬ್ಬರು 511 ಅಂಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಕುಂದಾಪುರ ಜ್ಯೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಪಡುಕೋಣೆ ನಿವಾಸಿ ಸ್ನೇಹಾ 511 ಅಂಕ ಪಡೆದಿದ್ದು ಕನ್ನಡದಲ್ಲಿ 93, ಇಂಗ್ಲೀಷ್‌ನಲ್ಲಿ 75, ಎಕನಾಮಿಕ್ಸ್ 75, ಬಿಸಿನೆಸ್ ಸ್ಟಡೀಸ್ 89, ಅಕೌಂಟೆನ್ಸಿ 85, ಕಂಪ್ಯೂಟರ್ ಸೈನ್ಸ್‌ನಲ್ಲಿ 64 ಅಂಕ ಪಡೆದಿದ್ದಾರೆ. ಸ್ನೇಹಾ ಪಡುಕೋಣೆ ನಿವಾಸಿ ದಿವಂಗತ ಸುಧೀರ್, ಹಾಗೂ ಕೂಲಿ ಮಾಡುವ ಮಮತಾ ಅವರ ಇಬ್ಬರು ಪುತ್ರಿಯರ ಪೈಕಿ ಕಿರಿಯವಳು. ಸ್ನೇಹಾ ಮುಂದೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ, ಬಾರ್ಕೂರು ನಿವಾಸಿ ಭಾಗ್ಯಶ್ರೀ 511 ಅಂಕ ಪಡೆದಿದ್ದು ಕನ್ನಡದಲ್ಲಿ 97, ಇಂಗ್ಲೀಷ್ 60, ಹಿಸ್ಟರಿ 92, ಎಕನಾಮಿಕ್ಸ್ 77, ಸೋಶಿಯಾಲಜಿ 92, ಪೊಲಿಟಿಕಲ್ ಸೈನ್ಸ್‌ನಲ್ಲಿ 93 ಅಂಕ ಪಡೆದಿದ್ದಾರೆ. ಭಾಗ್ಯಶ್ರೀ ತಂದೆ ರಾಜು ಪೌರಕಾರ್ಮಿಕರಾಗಿದ್ದು, ತಾಯಿ ಸುಗುಣಾ  ಗೃಹಿಣಿಯಾಗಿದ್ದಾರೆ. ಮುಂದೆ ಬಿಎ ಮಾಡುವ ಕನಸು ಭಾಗ್ಯಳದ್ದು.

Similar News