×
Ad

ಮೂಳೂರು ಅಲ್ ಇಹ್ಸಾನ್ ಕಾಲೇಜು ಶೇ.100 ಫಲಿತಾಂಶ

Update: 2023-04-21 19:17 IST

ಕಾಪು, ಎ.21: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಳೂರು ಅಲ್ ಇಹ್ಸಾನ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ 70 ವಿದ್ಯಾರ್ಥಿಗಳಲ್ಲಿ 16 ಮಂದಿ ಉನ್ನತ ಶ್ರೇಣಿ, 45 ಮಂದಿ ಪ್ರಥಮ ದರ್ಜೆ ಹಾಗೂ ನಾಲ್ಕು ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಅಝ್ಮಿಯಾ 584(ಶೇ.97.33), ಸಪ್ರೀನಾ 581(ಶೇ.96.8), ಕುಬುರ 576(ಶೇ.96) ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಈ ಸಾಧನೆ ಮಾಡಿದ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳಿಗೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಭಿನಂದನೆ ಸಲ್ಲಿಸಿದೆ.  

Similar News