ಯಶ್ಪಾಲ್ ಸುವರ್ಣ ನಾಮಪತ್ರ ಸಲ್ಲಿಕೆಯ ಬೈಕ್ ರ‍್ಯಾಲಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲು
Update: 2023-04-21 19:55 IST
ಮಲ್ಪೆ, ಎ.21: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರ ನಾಮಪತ್ರ ಸಲ್ಲಿಕೆಯ ಬೈಕ್ ರ‍್ಯಾಲಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಪೂರ್ವಾನುಮತಿ ಪಡೆಯದೆ ಮಲ್ಪೆ ಸೀವಾಕ್‌ನಿಂದ ಬೆಳಗ್ಗೆ 10.15ಕ್ಕೆ ಸುಮಾರು 260 ಬೈಕ್‌ಗಳಲ್ಲಿ ಜಾಥ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ದೂರಲಾಗಿದೆ. ಅದರಂತೆ ಕಾರ್ಯಕ್ರಮದ ಆಯೋಜಕ ವಿಜಯ ಕುಂದರ್ ವಿರುದ್ಧ ಪ್ರಕರಣ ದಾಖಲಾಗಿದೆ.