×
Ad

ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

Update: 2023-04-22 15:23 IST

ಉಳ್ಳಾಲ : ಇಲ್ಲಿನ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಈದ್ ನಮಾಝ್ ನಡೆಯಿತು.

ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಇಬ್ರಾಹಿಮ್ ಸಅದಿ ನೇತೃತ್ವ ವಹಿಸಿ ಖುತುಬಾ ಪಾರಾಯಣ ಮಾಡಿದರು. ಬಳಿಕ ಧಾರ್ಮಿಕ ಉಪನ್ಯಾಸ ನೀಡಿದ ಅವರು,  ಇಸ್ಲಾಂನಾ ಪಂಚ ಕಾರ್ಯ ಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಸೌಹಾರ್ದಯುತ ವಾಗಿ  ಬಾಳಬೇಕು ಎಂದು ಕರೆ ನೀಡಿದರು.

ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ದರ್ಗಾ ಝಿಯಾರತ್ ನಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಧ್ಯಕ್ಷ ಹನೀಫ್ ಹಾಜಿ ಅವರು, ಒಂದು ತಿಂಗಳ ಉಪವಾಸದ ಸಮಾರೋಪ ಹಬ್ಬವಾಗಿರುವ ಈದುಲ್ ಫಿತರ್ ಅನ್ನು ಜಗತ್ತಿನ ಮುಸ್ಲಿಮರು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ರಂಝಾನ್ ತಿಂಗಳ ಉಪವಾಸ ಕಾಲದಲ್ಲಿ ಹಸಿವಿನ ಅನುಭವವನ್ನೂ ಅನ್ನ ಪಾನೀಯಗಳ ರುಚಿಯನ್ನೂ ಅರ್ಥ ಮಾಡಿದ ಜನರು ಜೀವನದುದ್ದಕ್ಕೂ ಬಡವರ ಹಸಿವನ್ನು ನೀಗಿಸಲು ಪ್ರಯತ್ನಿಸಬೇಕಿದೆ.‌ ಉಪವಾಸ ಕಾಲದಲ್ಲಿ ಕೆಡುಕುಗಳಿಂದ ದೂರವಾಗಿ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡವರು ಜೀವನದು ದ್ದಕ್ಕೂ ಅದನ್ನು ಮುಂದುವರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿ ಸರ್ವರಿಗೂ ಶುಭ ಹಾರೈಕೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ  ಯು.ಟಿ.ಖಾದರ್ ದರ್ಗಾ ಝಿಯಾರತ್ ಸರ್ವರಿಗೂ ಈದ್ ಗೆ  ಶುಭ ಹಾರೈಸಿದರು. ದರ್ಗಾ ಉಪಾಧ್ಯಕ್ಷ ಯು.ಎಮ್ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕ್ಕಚೇರಿ, ಸಮಿತಿ ಸದಸ್ಯ ರಾದ ಸೈಯದ್ ಝಿಯಾದ್ ತಂಙಳ್, ಅಬೂಬಕ್ಕರ್ ಅಲಿನಗರ, ಝೈನ್ ಮೇಲಂಗಡಿ, ತಂಝೀಲ್ ಮುಕ್ಕಚೇರಿ, ಫಾರೂಕ್ ಮುಕ್ಕಚ್ಚೇರಿ, ಸಮದ್ ಮೇಲಂಗಡಿ, ಹನೀಫ್ ಮಾರ್ಗತಲೆ, ಅಝೀಝ್ ಕೋಡಿ, ಫಾರೂಕ್‌ ಕೋಡಿ, ಮತ್ತಿತರರು  ಉಪಸ್ಥಿತರಿದ್ದರು

Similar News