×
Ad

ಉಪ್ಪಿನಂಗಡಿ: ಭೀಕರ ಅಪಘಾತದಲ್ಲಿ ತಂದೆ ಮೃತ್ಯು, ಮಕ್ಕಳಿಬ್ಬರು ಗಂಭೀರ

Update: 2023-04-22 18:20 IST

ಉಪ್ಪಿನಂಗಡಿ: ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದ್ವಿಚಕ್ರ ಸವಾರ ಮೃತಪಟ್ಟ ಘಟನೆ ಕಲ್ಲೇರಿಯಲ್ಲಿ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಬಾರ್ಯ ಮೂರುಗೋಳಿ ಬಳಿಯ ಕಳೆಂಜಿಬೈಲು ನಿವಾಸಿ ಜಾಫರ್ (35) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಜಾಫರ್ ಅವರ ಮಕ್ಕಳಾದ ಹಾಫಿದಾ (12), ಆಬೀದಾ (8) ಹಾಗೂ ಕಾರಿನಲ್ಲಿದ್ದ ಯು.ಟಿ. ರಹೀಂ, ಝುಬೈದಾ ಅವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಫರ್ ಅವರು ತನ್ನ ಮಕ್ಕಳಾದ ಹಾಫಿದಾ ಹಾಗೂ ಆಬೀದಾ ಅವರನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆ ತೆರಳುತ್ತಿದ್ದ ಸಂದರ್ಭ ಅವರ ದ್ವಿಚಕ್ರ ವಾಹನಕ್ಕೆ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಜಾಫರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಡುಗೆ ಕೆಲಸ ಮಾಡುತ್ತಿರುವ ಜಾಫರ್ ಅವರಿಗೆ ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಪಘಾತವಾದ ಎರಡೂ ಕಡೆಯವರು ಇಂದು ಈದುಲ್ ಫಿತ್ರ್ ಹಬ್ಬದ ಸಂಭ್ರಮದಲ್ಲಿದ್ದರು. ಅದೇ ಸಂಭ್ರಮದಲ್ಲಿ ಬರುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.  

ಕಾರು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಢಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣವೆನ್ನಲಾಗಿದ್ದು, ಅಪಘಾತಗೊಂಡ ಕಾರು ಹಾಗೂ ದ್ವಿಚಕ್ರ ವಾಹನ ರಸ್ತೆ ಬದಿಯ ಚರಂಡಿಗೆ ಇಳಿದಿವೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News