×
Ad

ಐಪಿಎಲ್: ಕೆಕೆಆರ್ ಗೆಲುವಿಗೆ 236 ರನ್ ಗುರಿ ನೀಡಿದ ಚೆನ್ನೈ

ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ಶಿವಂ ದುಬೆ ಅರ್ಧಶತಕ

Update: 2023-04-23 21:33 IST

 ಕೋಲ್ಕತಾ, ಎ.23: ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ ಹಾಗೂ ಶಿವಂ ದುಬೆ ಅರ್ಧಶತಕದ ಕೊಡುಗೆಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿಗೆ 236 ರನ್ ಕಠಿಣ ಗುರಿ ನೀಡಿದೆ.

ರವಿವಾರ ನಡೆದ 33ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಕೋಲ್ಕತಾ ತಂಡ ಚೆನ್ನೈ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 235 ರನ್ ಗಳಿಸಿತು.

ಮೊದಲ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿದ ಕಾನ್ವೆ(56 ರನ್, 40 ಎಸೆತ)ಹಾಗೂ ಋತುರಾಜ್ ಗಾಯಕ್ವಾಡ್(35 ರನ್, 20 ಎಸೆತ) ಮಿಂಚಿನ ಆರಂಭ ಒದಗಿಸಿದರು. ಈ ಇಬ್ಬರು ಔಟಾದ ನಂತರ ಜೊತೆಯಾದ ರಹಾನೆ(ಔಟಾಗದೆ 71 ರನ್, 29 ಎಸೆತ) ಹಾಗೂ ದುಬೆ(50 ರನ್, 21 ಎಸೆತ)3ನೇ ವಿಕೆಟ್‌ಗೆ 32 ಎಸೆತಗಳಲ್ಲಿ 85 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ರವೀಂದ್ರ ಜಡೇಜ 18 ರನ್ ಗಳಿಸಿದರು. ಕೆಕೆಆರ್ ಪರ ಕುಲ್ವಂತ್ ಖೆಜ್ರೊಲಿಯಾ(2-44)ಯಶಸ್ವಿ ಬೌಲರ್ ಎನಿಸಿಕೊಂಡರು.
 

Similar News