ಮುಸ್ಲಿಮರ ಮೀಸಲಾತಿ ರದ್ದುಗೊಳಿಸುವ ಕರ್ನಾಟಕ ಸರಕಾರದ ನಿರ್ಧಾರ ಮೇ. 9ರವರೆಗೆ ಜಾರಿ ಮಾಡುವಂತಿಲ್ಲ: ಸುಪ್ರೀಂಕೋರ್ಟ್

Update: 2023-04-25 06:49 GMT

ಹೊಸದಿಲ್ಲಿ: ಮುಸ್ಲಿಮರಿಗೆ 4 ಶೇ. ಒಬಿಸಿ  ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 9 ಕ್ಕೆ ಮುಂದೂಡಿದೆ.

ಏತನ್ಮಧ್ಯೆ, ಈ ಸರಕಾರದ ಆದೇಶದ ಆಧಾರದ ಮೇಲೆ ಮೇ 9 ರವರೆಗೆ ಯಾವುದೇ ಪ್ರವೇಶಾತಿ  ಅಥವಾ ನೇಮಕಾತಿ ನಡೆಯುವುದಿಲ್ಲ ಎಂದು ಕರ್ನಾಟಕ ಸರಕಾರ ಮಂಗಳವಾರ ಮತ್ತೊಮ್ಮೆ ಭರವಸೆ ನೀಡಿದೆ.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ಈ ಹಿಂದಿನಂತೆಯೇ ಮುಸ್ಲಿಮರಿಗೆ ಶೇಕಡಾ 4 ರಷ್ಟು ಕೋಟಾವು ಮೇ 9 ರವರೆಗೆ ಮುಂದುವರಿಯುತ್ತದೆ. ಈ ವಿಷಯವು ಮುಂದಿನ ವಿಚಾರಣೆಗೆ ಒಳಪಡಲಿದೆ ಎಂದು ಹೇಳಿದರು. ಆರಂಭದಲ್ಲಿ, ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಂದಿನ ವಿಚಾರಣೆಯ ವೇಳೆ ಉತ್ತರವನ್ನು ಸಲ್ಲಿಸುವುದಾಗಿ ಹೇಳಿದರು.

Similar News