×
Ad

ಅಟೋ ರಿಕ್ಷಾ ಚಾಲಕ ನಾಪತ್ತೆ: ದೂರು ದಾಖಲು

Update: 2023-04-25 18:56 IST

ಪುತ್ತೂರು : ಅಟೋ ಚಾಲಕನಾಗಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 

ಕೆಮ್ಮಿಂಜೆ ಗ್ರಾಮದ ಮರೀಲ್ ನಿವಾಸಿ ಇಬ್ರಾಹಿಂ ಪಾಪೆತ್ತಡ್ಕ (49) ನಾಪತ್ತೆಯಾದವರು. 

ಇಬ್ರಾಹಿಂ ಅವರು ಎಪ್ರಿಲ್ 21ರಂದು ಬೆಳಿಗ್ಗೆ ತನ್ನ ಅಟೋ ರಿಕ್ಷಾವನ್ನು ತನ್ನ ಬಾವ ಖಲೀಲ್ ಎಂಬವರಿಗೆ ನೀಡಿ, ಮನೆಯಲ್ಲಿ ಏನೂ ತಿಳಿಸದೆ ಹೊರಟು ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಇಬ್ರಾಹಿಂ ಅವರ ಪುತ್ರ ಆಸಿಫ್ ಅವರು ಪುತ್ತೂರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Similar News