ಮಹಿಳೆ ಆತ್ಮಹತ್ಯೆ
Update: 2023-04-25 20:40 IST
ಕಾರ್ಕಳ : ವೈಯಕ್ತಿಕ ಕಾರಣದಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.25ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ರವೀಂದ್ರ ಹೆಗ್ಡೆ ಎಂಬವರ ಪತ್ನಿ ಸವಿತಾ ಹೆಗ್ಡೆ (54) ಎಂದು ಗುರುತಿಸಲಾಗಿದೆ. ಪತಿ ಜೊತೆ ಕೃಷಿ ಕೆಲಸ ಮಾಡಿಕೊಂಡಿದ್ದ ಸವಿತಾ, ಮನೆ ಸಮೀಪದ ರೇಷ್ಮೆ ಕಟ್ಟಡದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.