ತೋಕೂರು ಚರ್ಚ್‌ನ ಸಮುದಾಯ ದಿನಾಚರಣೆ
Update: 2023-04-25 21:15 IST
ಮಂಗಳೂರು : ತೋಕೂರಿನ ಸಂತ ಸೆಬೆಸ್ಟಿನ್ ಚರ್ಚ್‌ನ ಸಮುದಾಯದ ದಿನಾಚರಣೆ ಹಾಗೂ ಸಂತ ಅಂತೋನಿ ಕ್ಲಬ್‌ನ ಬೆಳ್ಳಿ ಹಬ್ಬದ ಪ್ರಯುಕ್ತ ಸಂತ ಅಂತೋನಿಯ ಪ್ರತಿಮೆಯನ್ನು ಮಂಗಳವಾರ ಅನಾವರಣ ಗೊಳಿಸಲಾಯಿತು.
ಮಂಗಳೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು ಸಂತ ಅಂತೋನಿಯ ಪ್ರತಿಮೆಯನ್ನು ಆಶೀರ್ವದಿಸಿ ಭಕ್ತರಿಗೆ ಸಮರ್ಪಿಸಿದರು. ಬಳಿಕ ಸಮುದಾಯದ ದಿನಾಚರಣೆಯ ಅಂಗವಾಗಿ ಬಲಿಪೂಜೆಯ ನೇತೃತ್ವವನ್ನು ವಹಿಸಿ ಪ್ರವಚನ ನೀಡಿದರು.
ಈ ಸಂದರ್ಭ ಚರ್ಚಿನ ಉಪಾಧ್ಯಕ್ಷ ಫೆಬಿಯನ್ ವೇಗಸ್, ಕಾರ್ಯದರ್ಶಿ ಡಾಲಿ ಡಿಸೋಜ, ಸಂತ ಅಂತೋನಿ ಅಸೋಸಿಯೇಶನ್‌ನ ಅಧ್ಯಕ್ಷ ಹ್ಯಾಡ್ಲಿ ಡಿಸೋಜ, ಕಾರ್ಯದರ್ಶಿ ಓಸ್ವಲ್ಟ್ ವೇಗಸ್ ಉಪಸ್ಥಿತರಿದ್ದರು. ಚರ್ಚಿನ ಪ್ರಧಾನ ಧರ್ಮಗುರು ವಂ. ಫಾ. ರೂಪೇಶ್ ಮಾಡ್ತಾ ವಂದಿಸಿದರು.