×
Ad

​ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು

Update: 2023-04-25 21:35 IST

ಮಂಗಳೂರು : ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸೋಮಲಿಂಗ (17) ಎಂಬವರು ಮೃತಪಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಸೋಮವಾರ ರಾತ್ರಿ ಸುಮಾರು 12ಕ್ಕೆ ಚೇತನ್ ನಾಯ್ಕ್ ಅವರನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ಬಾರೆಬೈಲ್ ಕಡೆಯಿಂದ ಯೆಯ್ಯಾಡಿ ಜಂಕ್ಷನ್ ಮೂಲಕ ಕಾವೂರು ಕಡೆಗೆ ಹೋಗುತ್ತಿದ್ದಾಗ ಕೆಪಿಟಿ ಕಡೆಯಿಂದ ಮೇರಿಹಿಲ್‌ಗೆ ಹೋಗುತ್ತಿದ್ದ ಆಮ್ನಿ ಕಾರು ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಪರಿಣಾಮ ಸೋಮಲಿಂಗ  ಕಾರಿನ ಗಾಜಿನ ಮೇಲೆ ಎಸೆಯಲ್ಪಟ್ಟು ಬಳಿಕ ಡಿವೈಡರ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆರೋಪಿ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News