ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ಉಡುಪಿ : ಉಡುಪಿ ನಾರ್ತ್ ಶಾಲಾ ಹಳೆ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಎಂಟು ದಿನಗಳ ಕಾಲ ಉಚಿತ ಬೇಸಿಗೆ ಶಿಬಿರವನ್ನು ನಾರ್ತ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಬೇಸಿಗೆ ಶಿಬಿರವನ್ನು ಎ.16ರಂದು ಯುವ ಉದ್ಯಮಿ ಅಜಯ್ ಪಿ.ಶೆಟ್ಟಿ ಉದ್ಘಾಟಿಸಿದರು. ಎ.23ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ರಂಜಿತಾ ರಮಾನಾಥ್ ನಾಯಕ್, ಮುರಳಿ ಬಲ್ಲಾಳ್, ಉಡುಪಿ ಮೆಸ್ಕಾಂನ ಸಹಾಯಕ ಅಭಿಯಂತರ ಭಾಗ್ಯಶ್ರೀ ದೊಡ್ಡಮನಿ, ನಿವೃತ್ತ ಮುಖ್ಯೋಪಾ ಧ್ಯಾಯಿನಿ ಕಲ್ಯಾಣಿ ಪೈ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತೆ ಶಿವಾನಿ ಶೆಟ್ಟಿ ಮತ್ತು ಶಿಬಿರಕ್ಕೆ ಮಾರ್ಗದರ್ಶನ ನೀಡಿದ ಕಲ್ಯಾಣಿ ಪೈ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಹೇಶ್ ನಾಯಕ್, ಜಂಟಿ ಕಾರ್ಯದರ್ಶಿ ಹರೀಶ್ ಶೇರಿಗಾರ್, ಸಂಘದ ಸದಸ್ಯರುಗಳಾದ ಅಮರ ನಾಥ್ ಭಟ್, ಶೇಖ್ ಮಕ್ಬೂಲ್, ಚೇತನ್ ಕುಮಾರ್ ನಾಯಕ್, ಸತೀಶ್ ಹೆಗಡೆ, ಅನಿಲ್ ಬೈಲಕೆರೆ, ಸತೀಶ್ ಶೇಟ್, ಸುಧೀಂದ್ರ ರಾವ್, ವಿಶ್ವನಾಥ್ ಬಾಳಿಗಾ, ಚಂದ್ರಕಲಾ ಬಾಳಿಗಾ, ಶಾಂತಾ ಬಾಳಿಗಾ, ಜ್ಯೋತಿ ಬಲ್ಲಾಳ್, ಶಾಲಾ ಶಿಕ್ಷಕಿ ಶೋಭಾ ಶೆಟ್ಟಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸೃಜನ್ ಶೇರಿಗಾರ್, ಹರಿಪ್ರಸಾದ್, ಶ್ರೀದೇವಿ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ನಾರ್ತ್ ಶಾಲಾ ಹಳೆ ವಿದ್ಯಾರ್ಥಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರೊ.ಶ್ರೀನಾಥ್ ರಾವ್ ಕೆ. ವಹಿಸಿದ್ದರು. ಸಮಿತಿಯ ಕೋಶಾಧಿಕಾರಿ ಶ್ರೀದೇವಿ ಸ್ವಾಗತಿಸಿದರು. ಶುಭಾ ರಾವ್ ಕಾರ್ಯಕ್ರಮ ನಿರೂಪಿಸಿದರು. ರಂಜನ್ ಭಾಗವತ್ ವಂದಿಸಿದರು.
ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಸುಮಾರು 45 ಮಕ್ಕಳಿಗೆ ನೃತ್ಯ, ಚಿತ್ರಕಲೆ, ಕರಕುಶಲ ತರಬೇತಿ, ವ್ಯಕ್ತಿತ್ವ ವಿಕಸನ, ಪೇಪರ್ ಕ್ರಾಫ್ಟ್, ನೀತಿ ಕಥೆಗಳು, ಗ್ರಾಮೀಣ ಕ್ರೀಡೆಗಳು ಮುಂತಾದ ವಿವಿಧ ವಿಷಯಗಳ ಕುರಿತು ಚಟುವಟಿಕೆಗಳನ್ನು ನಡೆಸಲಾಯಿತು. ಮಕ್ಕಳಿಂದ ಮನೋ ರಂಜನಾ ಕಾರ್ಯಕ್ರಮ ನಡೆಯಿತು