ಉಡುಪಿ: ಪ್ರಸಾದ್‌ರಾಜ್‌ರಿಂದ ಅಲ್ಲಲ್ಲಿ ಪ್ರಚಾರ ಸಭೆ
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿರುವ ಪ್ರಸಾದ್‌ರಾಜ್ ಕಾಂಚನ್ ಅವರು ಇಂದು ಕ್ಷೇತ್ರದ ವಿವಿದೆಡೆಯ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತಯಾಚನೆ ನಡೆಸಿದರು.
ಅಜ್ಜರಕಾಡು ವಾರ್ಡ್‌ನಲ್ಲಿ ನಡೆದ ಕಾಂಗ್ರೆಸ್ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪ್ರಸಾದ್‌ರಾಜ್ ಕಾಂಚನ್ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಯಜ್ಞೇಶ್ ಆಚಾರ್ಯ ನೇತೃತ್ವದಲ್ಲಿ ದಿ.ಇರ್ವಿನ್ ಅಂದ್ರಾದೆ ಡೊಮಿನಿಕ್ ಅವರ ಮನೆಯಲ್ಲಿ ಸಭೆ ನಡೆಯಿತು.
ನಾವು ಕಷ್ಟಪಟ್ಟು ಕಟ್ಟಿದ ತೆರಿಗೆಯನ್ನು ಲೂಟಿ ಮಾಡಿ ಬಿಜೆಪಿ ಬೆಳೆದಿದೆ ಎಂದು ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಮಹಾಬಲ ಕುಂದರ್, ಕುಶಲ್ ಶೆಟ್ಟಿ, ಸುರೇಶ್ ಬನ್ನಂಜೆ, ರವಿರಾಜ್, ಸುರೇಂದ್ರ, ಪ್ರಶಾಂತ, ಗಣೇಶ ನೆರ್ಗಿ, ಕೀರ್ತಿ ಶೆಟ್ಟಿ, ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ತೆಂಕನಿಡಿಯೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಚನ್, ಈ ಗ್ರಾಮದಲ್ಲಿ ಪಕ್ಷಕ್ಕೆ ಬಹು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿದ್ದಾರೆ. ಈ ಎಲ್ಲಾ ಕಾರ್ಯಕರ್ತರು ಮನಸು ಮಾಡಿದರೆ ಯಾವ ಪಕ್ಷವೂ ಕಾಂಗ್ರೆಸ್ ಅನ್ನು ಸೋಲಿಸೋದಕ್ಕೆ ಸಾಧ್ಯವಿಲ್ಲ ಎಂದರು.
ಸಭೆಯಲ್ಲಿ ಅಮೃತ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ನಾಯಕರಾದ ರವಿರಾಜ್, ಮಮತಾ ಶೆಟ್ಟಿ, ಧನಂಜಯ್ ಕುಂದರ್, ಗೋಪಾಲಕೃಷ್ಣ ಶೆಟ್ಟಿ, ನಾಗೇಶ್ ಉದ್ಯಾವರ, ಮೀನಾ ಪಿಂಟೊ, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಪ್ರಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.
ಕಡೆಕಾರ್: ಕಾಂಗ್ರೆಸ್ ಕಾರ್ಯಕರ್ತರು ಇನ್ನಷ್ಟು ಶೃದ್ಧೆ, ಉತ್ಸಾಹದಿಂದ ಕೆಲಸ ಮಾಡಿದ್ದಲ್ಲಿ ದೇಶದಲ್ಲಿ ಕಾಂಗ್ರೆಸನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಪ್ರಸಾದ್‌ರಾಜ್ ಕಾಂಚನ್ ಕಡೆಕಾರಿನ ವಾರ್ಡ್ ಸಭೆಯಲ್ಲಿ ನುಡಿದರು.
ಕಾಂಗ್ರೆಸ್ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯು ವಾರ್ಡ್ ಉಸ್ತುವಾರಿ ಹಾಗೂ ಕಾಂಗ್ರೆಸ್ ಮುಖಂಡ ಶರತ್ ಶೆಟ್ಟಿ ನೇತೃತ್ವದಲ್ಲಿ ಕಡೆಕಾರಿನ ಬಿಲ್ಲವ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಕಡೆಕಾರು- ಕನ್ನರ್ಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಪ್ರಸಾದ್‌ರಾಜ್ ಕಾಂಚನ್‌ರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಬಲ ಕುಂದರ್, ಕುಶಲ್ ಶೆಟ್ಟಿ, ಸುರೇಶ್ ಬನ್ನಂಜೆ, ಮಾಜಿ ಜಿಪಂ ಸದಸ್ಯ ದಿವಾಕರ ಕುಂದರ್, ಕಡೆಕಾರ್ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಜತಿನ್ ಕಡೆಕಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರವಿರಾಜ್, ವನಜಾ ಜಯಕರ, ಕೇಶವ ಕೋಟ್ಯಾನ್, ವಾಮನ ಬಂಗೇರ, ನವೀನ ಶೆಟ್ಟಿ, ಸುಕೇಶ್ ಶೆಟ್ಟಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.