×
Ad

ಗಾಂಜಾ ಸೇವನೆ ಆರೋಪ: ಮೂವರ ಸೆರೆ

Update: 2023-04-26 21:25 IST

ಮಂಗಳೂರು: ನಗರದ ಗೋರಿಗುಡ್ಡೆ ಸ್ಮಶಾನದ ರಸ್ತೆ ಬದಿಯ ಮರವೊಂದರ ಬಳಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ರಜತ್ ವಿ. (22), ಮುಹಿನುದ್ದೀನ್ ಪಿ.ಎಂ. (22), ಅಧ್ವೈತ್ (20) ಬಂಧಿತ ಆರೋಪಿಗಳು. ಇವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News