×
Ad

ಮಂಗಳೂರು: ಐ ಫೋನ್ ಮಾರಾಟದ ಜಾಹೀರಾತು ನೀಡಿ ವಂಚನೆ

Update: 2023-04-27 20:46 IST

ಮಂಗಳೂರು, ಎ.27: ಐ ಫೋನ್ ಮಾರಾಟದ ಬಗ್ಗೆ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿದ್ದಲ್ಲದೆ ಹಣವನ್ನೂ ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ (ಸೈಬರ್, ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಫೇಸ್‌ಬುಕ್‌ನಲ್ಲಿ ಐ ಫೋನ್ ಮಾರಾಟದ ಕುರಿತು ಜಾಹೀರಾತನ್ನು ಗಮನಿಸಿದ್ದು, ಬಳಿಕ ಅದನ್ನು ಖರೀದಿಸುವ ಉದ್ದೇಶದಿಂದ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಐ ಪೋನ್‌ನ್ನು 13,500 ರೂ.ಗಳಿಗೆ ಮಾರಾಟ ಮಾಡುತ್ತಿದ್ದು ಕೆಲವು ಆಫರ್ ನೀಡುವುದಾಗಿಯೂ ಸೂಚಿಸಿದ. ಅಲ್ಲದೆ 13,500 ರೂ.ವನ್ನು ಗೂಗಲ್ ಪೇ ಮೂಲಕ ಪಾವತಿ ಮಾಡುವಂತೆ ತಿಳಿಸಿದ.

ಇದನ್ನು ನಂಬಿದ ದೂರುದಾರ ವ್ಯಕ್ತಿ ಗೂಗಲ್ ಪೇ ಮೂಲಕ ಮೊದಲು 5,150 ರೂ. ವರ್ಗಾಯಿಸಿದರು. ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ಹಣ ಖಾತೆಗೆ ಬಂದಿಲ್ಲವೆಂದು ತಿಳಿಸಿ ಮತ್ತೊಮ್ಮೆ ಹಣ ಪಾವತಿಸುವಂತೆ ತಿಳಿಸಿದ್ದಾನೆ. ಆ ಬಳಿಕ ಹಂತ ಹಂತವಾಗಿ ಮೋಸದಿಂದ 44,800 ರೂ. ವರ್ಗಾಯಿಸಿಕೊಂಡು ಐ ಫೋನ್ ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News