ಕೊಕ್ಕಡ: ಮರದ ಕೊಂಬೆ ಮೈಮೇಲೆ ಬಿದ್ದು ಮಹಿಳೆ ಮೃತ್ಯು
Update: 2023-04-28 14:57 IST
ಬೆಳ್ತಂಗಡಿ, ಎ.28: ಮರದ ಕೊಂಬೆ ಕಡಿಯುತ್ತಿದ್ದ ವೇಳೆ ಕೊಂಬೆಯು ಆಕಸ್ಮಿಕವಾಗಿ ಮೈಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಎಂಬಲ್ಲಿ ಇಂದು ನಡೆದಿದೆ.
ಮೃತ ಮಹಿಳೆಯನ್ನು ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಆಚಾರ್ಯ(60) ಎಂದು ಗುರುತಿಸಲಾಗಿದೆ. ಇವರ ಮನೆಯ ಸಮೀಪ ಬೃಹತ್ ಮರವೊಂದರ ರೆಂಬೆ ಕಡಿಯಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮರದ ಕೊಂಬೆಯು ಗಾಯತ್ರಿಯವರ ತಲೆ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.