ಉಡುಪಿ: ಬಾವಿಗೆ ಬಿದ್ದು ರೈಲ್ವೆ ಸಿಬ್ಬಂದಿ ಮೃತ್ಯು
Update: 2023-04-28 18:33 IST
ಉಡುಪಿ: ಇಂದ್ರಾಳಿಯ ರೈಲ್ವೆ ನಿಲ್ದಾಣದ ಸಮೀಪ ಇರುವ ಬಾವಿಗೆ ರೈಲ್ವೆ ಸಿಬ್ಬಂದಿಯೊಬ್ಬರು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ನಿತ್ಯಾನಂದ ಶೆಟ್ಟಿಗಾರ್ (47) ಎಂದು ಗುರುತಿಸಲಾಗಿದೆ.
ರೈಲ್ವೆ ಪೊಲೀಸ್, ನಗರ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆ ಮೂಲಕ ಬಾವಿಯಲ್ಲಿದ್ದ ಮೃತದೇಹ ಮೇಲಕ್ಕೆ ಎತ್ತಲಾಗಿದೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದ್ದಾರೆ. ಇವರು ಆತ್ಮಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.