ಚುನಾವಣಾ ಫಲಿತಾಂಶದಲ್ಲಿ ಸಮೀಕ್ಷೆಯ ನಂಬಿಕೆ ಬೇಡ : ಅಣ್ಣಾಮಲೈ
ಪುತ್ತೂರು: ಕರ್ನಾಟಕದಲ್ಲಿ ವಿಭಿನ್ನ ಚುನಾವಣಾ ಪೂರ್ವ ಸಮೀಕ್ಷೆಗಳು ಬರುತ್ತಿದ್ದು, ಸಮೀಕ್ಷೆಯಂತೆ ತೀರ್ಮಾನಿ ಸುವುದು ಬೇಕಾಗಿಲ್ಲ. ಬಿಜೆಪಿಯು ಈಗ ಸಾಕಷ್ಟು ಮುಂದೆ ಹೋಗುತ್ತಿದೆ. ರಾಜ್ಯಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಬಂದ ಬಳಿಕ ಇನ್ನೂ ಮುಂದೆ ಹೋಗಲಿದೆ. ಸಮೀಕ್ಷೆಯನ್ನು ನಂಬಬೇಡಿ. ಬಿಜೆಪಿ ರಾಜ್ಯದಲ್ಲಿ 130 ಸೀಟು ಗಳಿಸಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ, ರಾಜ್ಯದ ಸ್ಟಾರ್ ಪ್ರಚಾರಕ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಅವರು ಶನಿವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಪಕ್ಷವು ನೀಡಿರುವ ಭರವಸೆಯನ್ನು ಈಡೇರಿಸುತ್ತಿಲ್ಲ. ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ತಮಿಳ್ನಾಡಿನಲ್ಲಿ ಕಾಂಗ್ರೆಸ್ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕದ ಜನರು ಬುದ್ಧಿವಂತರು ಕಾಂಗ್ರೆಸ್‍ನ ಭರವಸೆಗೆ ಮರುಳಾಗುವುದಿಲ್ಲ. ಬಿಜೆಪಿ ಪಕ್ಷ ಗೆಲುವು ಪಡೆಯಬೇಕು ಎಂದು ಬಯಸುತ್ತಿದ್ದಾರೆ. ಕಾಂಗ್ರೆಸಿಗರು ರಾಜ್ಯಕ್ಕೆ ಪ್ರಿಯಾಂಕ ಗಾಂಧಿಯವರನ್ನು ತರಿಸಿ ದೋಸೆ ಮಾಡಿಸಿದಲ್ಲಿ ಜನ ಮತ ಹಾಕಲ್ಲ. ಪ್ರಧಾನಿ ಮೋದಿ ಅವರು ದೇಶಕ್ಕೆ ಅಗತ್ಯವಿರುವ ಧೈರ್ಯಶಾಲಿ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂದೆಯೂ ಇಂತಹ ಕ್ರಮಗಳ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕಣ್ಣೂರು, ಜಿಲ್ಲಾ ಕಾರ್ಯ ದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ತಮಿಳು ನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಸೂರ್ಯ, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ರೇಣುಕಾ ಪ್ರಸಾದ್, ಅಪ್ಪಯ್ಯ ಮಣಿಯಾಣಿ ಆರ್.ಸಿ.ನಾರಾಯಣ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಪಿ.ಜಿ.ಜಗನ್ನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.