×
Ad

ಮಂಗಳೂರು ನಗರದಲ್ಲಿ ಅಮಿತ್ ಶಾ ರೋಡ್ ಶೋ

Update: 2023-04-29 19:48 IST

ಮಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ರೋಡ್ ಶೋ ಮಂಗಳೂರು ನಗರದಲ್ಲಿ ಶನಿವಾರ ನಡೆಯಿತು.

ನಗರದ ಪುರಭವನ ಸಮೀಪದ ಕ್ಲಾಕ್ ಟವರ್‌ನಿಂದ ಕೊಡಿಯಾಲ್‌ ಬೈಲ್‌ನ ಮಂಜೇಶ್ವರ ಗೋವಿಂದ ಪೈ ಸರ್ಕಲ್ ವರೆಗೆ ಈ ರೋಡ್ ಶೋ ನಡೆಯಿತು. ಕಾರ್ಯಕರ್ತರು, ಬೆಂಬಲಿಗರು ರೋಡ್ ಶೋದಲ್ಲಿ ಪಾಲ್ಗೊಂಡರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳೀನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್,  ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ಅವರು ಅಮಿತ್ ಶಾಗೆ ಸಾಥ್ ನೀಡಿದರು.

Similar News