ಅಮೆರಿಕದಲ್ಲಿ ಶೂಟೌಟ್: ಬಾಲಕನ ಸಹಿತ 5 ಮಂದಿ ಮೃತ್ಯು
Update: 2023-04-29 22:58 IST
ವಾಷಿಂಗ್ಟನ್, ಎ.29: ಅಮೆರಿಕದ ಟೆಕ್ಸಾಸ್ ನ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ 8 ವರ್ಷದ ಬಾಲಕನ ಸಹಿತ 5 ಮಂದಿ ಮೃತಪಟ್ಟಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.
ಟೆಕ್ಸಾಸ್ನ ಕ್ಲೀವ್ಲ್ಯಾಂಡ್ನಲ್ಲಿನ ಮನೆಯೊಂದರಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಶುಕ್ರವಾರ ರಾತ್ರಿ 11:30ಕ್ಕೆ ಮಾಹಿತಿ ಲಭಿಸಿದ್ದು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಸ್ಥಳಕ್ಕೆ ತಲುಪಿದಾಗ ಅಲ್ಲಿ ನಾಲ್ಕು ಮಂದಿ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಶಂಕಿತ ಆರೋಪಿ ಮೆಕ್ಸಿಕನ್ ಪ್ರಜೆ ಎಂದು ಗುರುತಿಸಲಾಗಿದ್ದು ಆತ ಮದ್ಯದ ಅಮಲಿನಲ್ಲಿ ಈ ಕೆಲಸ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ದುಷ್ಕರ್ಮಿ ಪರಾರಿಯಾಗಿದ್ದು ಆತನ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ಹೇಳಿದೆ.