ಹಿಂದೂಗಳನ್ನೇ ರಕ್ಷಿಸದವರು ಇನ್ಯಾರನ್ನು ರಕ್ಷಿಸುತ್ತಾರೆ?: ಡಾ. ಶಂಸುಲ್ ಇಸ್ಲಾಂ
ದಿಲ್ಲಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಂಸುಲ್ ಇಸ್ಲಾಂ ಅವರು ಧಾರ್ಮಿಕ ರಾಷ್ಟ್ರೀಯತೆ, ಏಕಸ್ವಾಮ್ಯ ಬಂಡವಾಳಶಾಹಿ ಜತೆಗೆ ಹೊಂದಿರುವ ಸಂಬಂಧದ ಬಗ್ಗೆ ನಿರಂತರವಾಗಿ ಜಗತ್ತನ್ನು ಎಚ್ಚರಿಸುತ್ತಿದ್ದಾರೆ. ಧರ್ಮದ ಆಧಾರದಲ್ಲಿ ನಿರ್ಮಾಣವಾದ ರಾಷ್ಟ್ರಗಳ ಅಧಃಪತನವನ್ನು ಕಣ್ಣಿಗೆ ಕಟ್ಟುವಂತೆ ತಮ್ಮ ಕೃತಿಗಳಲ್ಲಿ ದಾಖಲೆಗಳ ಸಮೇತ ಮಂಡಿಸಿದ್ದಾರೆ. ಈ ಕಾರಣಕ್ಕೆ ಬಾಂಗ್ಲಾ, ಪಾಕಿಸ್ತಾನದಿಂದ ನಿರಂತರ ಬೆದರಿಕೆಗೆ ಒಳಗಾಗಿರುವ ಇವರು ಭಾರತದಲ್ಲೂ ತಮ್ಮ ನಿಷ್ಠುರ ನಿಲುವುಗಳ ಕಾರಣಕ್ಕೆ ಹಲ್ಲೆಗೆ ಒಳಗಾಗಿದ್ದಾರೆ. ಆದರೂ ಜನರನ್ನು ಎಚ್ಚರಿಸುವ ಒಬ್ಬ ಲೇಖಕನ ಜವಾಬ್ದಾರಿಯನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಮಾನವ ಹಕ್ಕುಗಳ ಕುರಿತಾದ ಕಾರ್ಯಾಗಾರಕ್ಕಾಗಿ ನಾಡಿಗೆ ಭೇಟಿ ನೀಡಿದ್ದ ಇವರು ‘ವಾರ್ತಾಭಾರತಿ’ಗೆ ಕೊಟ್ಟಿರುವ ಸಂದರ್ಶನದ ಸಾರಾಂಶ ಇಲ್ಲಿದೆ...
►ಧರ್ಮಾಧಾರಿತ ರಾಷ್ಟ್ರ ನಿರ್ಮಾಣದ, ಧರ್ಮಾಧಾರಿತ ರಾಷ್ಟ್ರೀಯತೆಯನ್ನು ನೀವು ನಿಷ್ಠುರವಾಗಿ ವಿರೋಧಿಸಲು ಕಾರಣವೇನು?
ಬಿಜೆಪಿ ಮತ್ತು ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ ತಾನೇ? ಸಂತೋಷ. ಹಾಗಾದರೆ ಬಿಜೆಪಿಯವರು ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ, ಬೌದ್ಧರಿಗೆ, ಸಿಖ್ಖರಿಗೆ ಉದ್ಯೋಗ, ಮೀಸಲಾತಿ, ಭೂಮಿ ಏನನ್ನೂ ಕೊಡುವುದೇ ಬೇಡ.
ಪ್ರಾಮಾಣಿಕವಾಗಿ ಎಲ್ಲಾ ಹಿಂದೂ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿ, ಎಲ್ಲಾ ಭೂ ರಹಿತ ಹಿಂದೂಗಳಿಗೆ ಭೂಮಿ ಕೊಡಿ, ಎಲ್ಲಾ ಹಿಂದುಳಿದ ಹಿಂದೂಗಳಿಗೆ ಮೀಸಲಾತಿ ಕೊಡಿ. ಹಿಂದುಳಿದಿರುವ ಹಿಂದೂಗಳಿಗೆ ಬದುಕಿನ ಅವಕಾಶ ಕಲ್ಪಿಸಿ. ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿ, ಅತ್ಯಾಚಾರಕ್ಕೆ ಒಳಗಾಗಿರುವ ಹಿಂದೂ ಮಹಿಳೆ ಯರಿಗೆ-ಹುಡುಗಿ ಯರಿಗೆ ನ್ಯಾಯ ಒದಗಿಸಿ, ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ ವನ್ನು ಸಂಪೂರ್ಣ ನಿಲ್ಲಿಸಿ.
ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳು ಮುಸ್ಲಿಮ್ ಹೆಣ್ಣುಮಕ್ಕಳಲ್ಲ. ಅವರೆಲ್ಲ ಭಾರತದ ಬಾವುಟವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಏರಿಸಿದ ನಮ್ಮ ಹೆಮ್ಮೆಯ ಹಿಂದೂ ಹೆಣ್ಣುಮಕ್ಕಳು. ಹಿಂದೂ ಬಾಲಕಿ ಮತ್ತು ಹಿಂದೂ ಪತ್ರಕರ್ತೆಯನ್ನು ಅತ್ಯಾಚಾರ ಎಸಗಿದ ದೇವಮಾನವನಿಗೆ ಐದು ಬಾರಿ ಪೆರೋಲ್ ನೀಡಲಾಗಿದೆ.
ಉನ್ನಾವೋ ಪ್ರಕರಣ, ಹಾಥರಸ್ ಪ್ರಕರಣದಲ್ಲಿ ಅತ್ಯಾಚಾರ ದೌರ್ಜನ್ಯಕ್ಕೆ ಒಳಗಾಗಿದ್ದು, ಇಂತಹ ನೂರಾರು ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ಹಿಂದೂ ಹೆಣ್ಣುಮಕ್ಕಳು. ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಶೇ.10ರಷ್ಟು ಕೂಡ ಮುಸ್ಲಿಮ್ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿಲ್ಲ.
ಹಿಂದೂ ಹೆಣ್ಣು ಮಕ್ಕಳನ್ನೇ ರಕ್ಷಣೆ ಮಾಡಲಾಗದ ಈ ಹಿಂದುತ್ವ ವಾದಿ ಸರಕಾರಗಳು ಬೇರೆ ಯಾರನ್ನು ರಕ್ಷಿಸುತ್ತವೆ? ಹಿಂದೂ ರಾಷ್ಟ್ರ ನಿರ್ಮಿಸುತ್ತೇವೆ ಎಂದು ಹೊರಟಿರುವವರಿಂದ ನಿಜವಾ ಗಲೂ ರಕ್ಷಣೆ ಬೇಕಿರುವುದು ಹಿಂದೂಗಳಿಗೆ.
ಧಾರ್ಮಿಕ ರಾಷ್ಟ್ರೀಯವಾದ ಎನ್ನುವುದು ಒಂದು ಕಪಟತನ ಮತ್ತು ಮೋಸ. ಬಂಡವಾಳಶಾಹಿ ಲೂಟಿಗೆ ರಾಜಮಾರ್ಗವನ್ನು ಸೃಷ್ಟಿಸಿ ಕೊಡುವ ರಾಕ್ಷಸಮಾರ್ಗ. ಹೀಗಾಗಿ ಇದನ್ನು ನಾನು ಕಟುವಾಗಿ ವಿರೋಧಿಸುತ್ತೇನೆ.
►ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಎಫ್‌ಐಆರ್ ದಾಖಲಾಗಿದೆಯಲ್ಲಾ?
ನನ್ನ ಜತೆ ನೀವು ಈಗ ದಿಲ್ಲಿಯ ಜಂತರ್ ಮಂತರ್‌ಗೆ ಬನ್ನಿ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರದ ಘನತೆಯನ್ನು ಎತ್ತಿಹಿಡಿದ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಜನವರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮನ್ನು ಮನೆಗೆ ಕರೆಯುತ್ತಾರೆ, ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ, ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಾರೆ ಎಂದೆಲ್ಲಾ 17 ವರ್ಷದ ಬಾಲಕಿ ಸೇರಿ ಭಾರತದ ಹೆಮ್ಮೆಯ ಮಹಿಳಾ ಕುಸ್ತಿಪಟು ಗಳು ನೇರವಾಗಿ ಆರೋಪಿಸಿ ಪ್ರತಿಭಟಿಸುತ್ತಿದ್ದಾರೆ.
ಸ್ವರ್ಣ ಪದಕ ಗೆದ್ದಿರುವ ಪ್ರಪ್ರಥಮ ಮಹಿಳಾ ಕುಸ್ತಿಪಟು ವಿನೇಶ್ ಪೋಘಾಟ್ ಸೇರಿದಂತೆ ಇನ್ನೂ ಹಲವಾರು ಕುಸ್ತಿಪಟುಗಳು ಆರೋಪವನ್ನು ಮಾಡಿದ್ದಾರೆ. ನಮ್ಮ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆದ್ದು ತಂದಾಗ ಅವರನ್ನು ಪ್ರಧಾನ ಮಂತ್ರಿಗಳು ಕರೆದು ಸನ್ಮಾನಿಸುತ್ತಾರೆ.
ಆದರೆ ಅದೇ ಕ್ರೀಡಾಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರತಿಭಟಿಸುತ್ತಿದ್ದರೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಇವರಿಗೆ ಯಾವ ಸ್ಪಂದನೆಯೂ ಇಲ್ಲ. ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನದ ನಂತರ ನೆಪಮಾತ್ರದ ಎಫ್‌ಐಆರ್ ದಾಖಲಾಗಿದೆ. ನಮ್ಮ ದೇಶದ ಘನತೆಯನ್ನು ಮುಗಿಲೆತ್ತರಕ್ಕೆ ಏರಿಸಿದ ನಮ್ಮ ಹೆಣ್ಣು ಮಕ್ಕಳು ಏಕೆ ತಮ್ಮ ಘನತೆ, ಗೌರವ ಕಾಪಾಡಿಕೊಳ್ಳಲು ಬೀದಿಗೆ ಇಳಿಯುವಂಥಾ ಪರಿಸ್ಥಿತಿ ನಿರ್ಮಾಣವಾಗಿದೆ.
► ಮಹಿಳಾ ಕುಸ್ತಿ ಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೂ ರಾಷ್ಟ್ರೀಯತೆಗೂ ಏನು ಸಂಬಂಧ?
ಜನವರಿಯಿಂದ ನಮ್ಮ ಮಹಿಳಾ ಕುಸ್ತಿ ಪಟುಗಳು ಪ್ರತಿಭಟಿಸುತ್ತಿ ದ್ದರೂ ಇವರಿಗೆ ಸರಕಾರದ ಸ್ಪಂದನೆ ದೊರೆಯದಿರುವುದಕ್ಕೆ ಕಾರಣ ಧಾರ್ಮಿಕ ರಾಷ್ಟ್ರೀಯವಾದವನ್ನು ಆಚರಿಸುವ ಆರೆಸ್ಸೆಸ್‌ನ ಆಲೋಚನಾ ಕ್ರಮ. ಮಹಿಳೆಯನ್ನು ಬಳಕೆಯ ವಸ್ತು ಎಂದು ಪರಿಗಣಿಸುವ ಸಂಘಿ ಮನಸ್ಥಿತಿ ಇದು. ಸಿಡ್ನಿಯಲ್ಲಿ ಬಿಜೆಪಿಯ ಅಂತರ್‌ರಾಷ್ಟ್ರೀಯ ಸಂಘಟಕ ಬಲೇಶ್ ದಂಖರ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. 18-19ನೇ ಶತಮಾನದ ರಾಷ್ಟ್ರವಾದಕ್ಕೂ ಇವತ್ತು ಬಿಜೆಪಿ ಹೇಳುತ್ತಿ ರುವ ರಾಷ್ಟ್ರೀಯವಾದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಈ ಹೊತ್ತಿನ ಕ್ಯಾಪಿಟಲಿಸಮ್-ರಾಷ್ಟ್ರೀಯವಾದ-ಹಿಂದುತ್ವ ಮೂರೂ ಕೂಡ ಒಂದರೊಳಗೊಂದು ಬೆಸೆದುಕೊಂಡಿವೆ. ಇದು ಅತ್ಯಂತ ಅಪಾಯಕಾರಿ ಸನ್ನಿವೇಶ. ಜನರ ಬದುಕಿನ ಅವ ಕಾಶಗಳನ್ನು, ದುಡಿಮೆಯನ್ನು ಕಿತ್ತುಕೊಳ್ಳುತ್ತಾ ಕ್ಯಾಪಿಟಲಿಸಮ್ ದೌರ್ಜನ್ಯ ಎಸಗುತ್ತಿದೆ. ರಾಷ್ಟ್ರೀಯವಾದಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಹಿಂದುತ್ವದ ಅಮಲು ಏರಿಸಿ ಜನರನ್ನು ಅವರ ನಿತ್ಯ ಸಂಕಷ್ಟಗಳಿಂದ ಮರೆಮಾಚಲು ಯತ್ನಿಸುತ್ತಿದೆ. ಕ್ಯಾಪಿಟಲಿಸಂನಿಂದ ಶೇ.80ರಷ್ಟು ಶ್ರಮಿಕ ಹಿಂದೂಗಳು, ಹಿಂದುಳಿದ ಜಾತಿ-ಸಮುದಾಯಗಳ ಹಿಂದೂಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೂಗಳನ್ನು ಬಂಡವಾಳಶಾಹಿ ರಾಷ್ಟ್ರೀಯವಾದಿ ಹಿಂದುತ್ವಕಾಪಾಡುತ್ತಿಲ್ಲ ಏಕೆ ಎನ್ನುವುದು ಈ ದೇಶದ ಜನಸಾಮಾನ್ಯರ ಪ್ರಶ್ನೆಯೂ ಆಗಿದೆ.
ಹೀಗಾಗಿ ಹಿಂದುತ್ವದ ಹೆಸರಿನಲ್ಲಿ ಹೇಳಲಾಗುವ ಸುಳ್ಳು ಮತ್ತು ವಂಚನೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಾರತದ ಉಳಿದೆಲ್ಲಾ ಉದ್ಯಮಿಗಳನ್ನು ಹಿಂದಿಕ್ಕಿ ಕೇವಲ ಅದಾನಿ ಮತ್ತು ಅಂಬಾನಿಯವರ ಬೆಳವಣಿಗೆ ಆಗಿದ್ದು ಆಕಸ್ಮಿಕವಲ್ಲ. ಇದು ವ್ಯವಸ್ಥಿತವಾಗಿ ನಡೆದ ಬೆಳವಣಿಗೆ. ಇವರ ರಾಷ್ಟ್ರೀಯವಾದ ಎಂದರೆ ಏಕಸ್ವಾಮ್ಯ ಬಂಡವಾಳಶಾಹಿ, ಇವರ ಹಿಂದುತ್ವ ಎಂದರೆ ಅದು ಏಕಸ್ವಾಮ್ಯ ಬಂಡವಾಳಶಾಹಿಯ ಮತ್ತೊಂದು ಮುಖ.
► ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕೂಡ ಧರ್ಮದ ಆಧಾರದಲ್ಲೇ ರಚಿತವಾದ ದೇಶಗಳು ತಾನೇ?
ನಾವೆಲ್ಲರೂ ಪಾಕಿಸ್ತಾನದಿಂದ ಪಾಠ ಕಲಿಯಬೇಕಿದೆ. ಮುಸ್ಲಿಮರ ರಕ್ಷಣೆ ಮಾಡುವುದಾಗಿ ಧರ್ಮದ ಆಧಾರದಲ್ಲಿ ನಿರ್ಮಾಣ ಗೊಂಡ ಪಾಕಿಸ್ತಾನದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗಿದೆಯಾ? ಪಾಕಿಸ್ತಾನದ ಬಡ ಹಿಂದುಳಿದ ಮುಸ್ಲಿಮರಿಗೆ ಉದ್ಯೋಗ ಕೊಡಲು ಸಾಧ್ಯವಾಗಿದೆಯಾ? ಭೂ ರಹಿತ ಮುಸ್ಲಿಮ್ ಕುಟುಂಬಗಳಿಗೆ ಭೂಮಿ ಕೊಡಲು ಸಾಧ್ಯವಾಗಿದೆಯಾ? ನಾವು ನಿಮ್ಮ ಗುಲಾಮತನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿ ತಿರುಗಿ ಬಿದ್ದ ಬಾಂಗ್ಲಾದವರು ಹಿಂದೂಗಳಲ್ಲ.
ಅವರೂ ಮುಸ್ಲಿಮರೇ ಆಗಿದ್ದಾರೆ. ಪಾಕಿಸ್ತಾನದ ಸೈನ್ಯ ಮುಸ್ಲಿಮ್ ಹೆಣ್ಣುಮಕ್ಕಳನ್ನು ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದೆ.ಅದೇ ರೀತಿ ಹಿಂದೂ ರಾಷ್ಟ್ರ ನಿರ್ಮಿಸುತ್ತೇವೆ ಎಂದು ಅಧಿಕಾರಕ್ಕೆ ಬಂದವರು ಹಿಂದೂಗಳ ಬಡತನ ನಿವಾರಿಸಿದ್ದಾರಾ? ಹಿಂದೂಗಳು ಉಪವಾಸ ಮಲಗುವುದನ್ನು ತಪ್ಪಿಸಿದ್ದಾರಾ? ಹೀಗಾಗಿ ನಾನು ಮುಸ್ಲಿಮ್ ಬುದ್ದಿಜೀವಿಗಳಿಗೆ, ಮುಸ್ಲಿಮ್ ನಾಯಕರಿಗೆ ಹೇಳುವುದೇನೆಂದರೆ ನಾವು ಭಾರತದಲ್ಲಿ ಹಿಂದುಳಿದ ಹಿಂದೂಗಳ ಪರವಾಗಿ ಹೋರಾಟ ನಡೆಸಬೇಕಿದೆ. ಭಾರತ ಉಳಿದರೆ, ಭಾರತ ದಲ್ಲಿ ಪ್ರಜಾಪ್ರಭುತ್ವ ಉಳಿದರೆ ಮಾತ್ರ ಶೇ.80ರಷ್ಟು ಹಿಂದೂಗಳು ಉಳಿಯಲು ಸಾಧ್ಯ. ಈ ಸತ್ಯವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
► ಈ ಹೊತ್ತಿನ ಧಾರ್ಮಿಕ ದಾಳಿ ಮತ್ತು ದೌರ್ಜನ್ಯಗಳಲ್ಲಿ ಕಾಂಗ್ರೆಸ್‌ನ ಕೊಡುಗೆ ಇಲ್ಲವೇ?
ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ನಾನು ಸಾಕಷ್ಟು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ನನ್ನ ಕಾಲು ಮುರಿದದ್ದು ಕಾಂಗ್ರೆಸ್ ಅವಧಿಯಲ್ಲಿ, ನನ್ನ ಮೇಲೆ ಸಾಕಷ್ಟು ದಾಳಿಗಳು ನಡೆದದ್ದೂ ಕೇವಲ ಬಿಜೆಪಿ ಅವಧಿಯಲ್ಲಿ ಮಾತ್ರವಲ್ಲ. ಕಾಂಗ್ರೆಸ್ ಅವಧಿಯಲ್ಲೂ ನಡೆದಿವೆ. ಇದೆಲ್ಲಾ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಚೆನ್ನಾಗಿ ಅರ್ಥವಾಗಿದೆ. ಹೀಗಾಗಿ ಇವರು ನಿಜವಾದ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ, ಸೈದ್ಧಾಂತಿಕವಾಗಿ ಪ್ರಬಲಗೊಳಿಸಲು ಮುಂದಾಗಿದ್ದಾರೆ.
ಭಾರತ ಉಳಿದರೆ ಮಾತ್ರ ಕಾಂಗ್ರೆಸ್ ಕೂಡ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಮಾತ್ರ ಕಾಂಗ್ರೆಸ್ ಉಳಿಯುತ್ತದೆ. ಭಾರತ ಉಳಿದರೆ ಮಾತ್ರ ಶೇ.80ರಷ್ಟಿರುವ ಹಿಂದುಳಿದ ಹಿಂದೂಗಳು ಉಳಿಯಲು ಸಾಧ್ಯ. ಭಾರತದ ಸಂವಿಧಾನ, ಭಾರತದ ಪ್ರಜಾಪ್ರಭುತ್ವವೇ ನಾಶವಾದರೆ ನಾಶವಾಗುವುದು ಕೇವಲ ಶೇ.20ರಷ್ಟಿರುವ ಮುಸ್ಲಿಮರು ಮಾತ್ರವಲ್ಲ. ಶೇ.80ರಷ್ಟು ಹಿಂದೂಗಳೂ ನಾಶವಾಗುತ್ತಾರೆ ಎನ್ನುವುದು ಈಗ ಭಾರತದ ಹಿಂದೂ ಜಾತಿ-ಸಮುದಾಯಗಳಿಗೆ ಚೆನ್ನಾಗಿ ಅರ್ಥವಾಗುತ್ತಿದೆ. ನಾನು ನಲವತ್ತು ವರ್ಷಗಳಿಂದ ಆರೆಸ್ಸೆಸ್ ವಿರುದ್ಧ ದಾಖಲೆಗಳ ಸಮೇತ ಮಾತನಾಡುತ್ತಿದ್ದೇನೆ.
ಆರೆಸ್ಸೆಸ್ ಬಗ್ಗೆ ನನ್ನ ಬಳಿ ಇರುವಷ್ಟು ದಾಖಲೆಗಳು ಅವರ ಬಳಿಯೂ ಇಲ್ಲ. ನಾನು ಈಗಲೂ ಸವಾಲುಹಾಕುತ್ತೇನೆ. ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿ ಸಲಿ ನೋಡೋಣ. ಅವರು ನನ್ನ ಬಾಯಿ ಮುಚ್ಚಿಸಲು ನನ್ನ ಬೆರಳುಗಳನ್ನು ಮುರಿಯಬಹುದು, ಕಾಲು ಮುರಿಯಬಹುದು, ತಲೆ ಒಡೆಯಬಹುದು. ಆದರೆ ಸತ್ಯವನ್ನು ಮುಚ್ಚಿಡಲು, ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಲವತ್ತು ವರ್ಷಗಳಿಂದ ನಾನು ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನೂ ಬಹಿರಂಗಗೊಳಿಸಿದ್ದೇನೆ. ಸಾರ್ವಜನಿಕಗೊಳಿಸಿದ್ದೇನೆ.
► ಹಿಂದೂಗಳಲ್ಲಿ ಶೇ.80ರಷ್ಟಿರುವ ಶೂದ್ರರು ಮತ್ತು ದಲಿತರು ಈಗ ಶಿಕ್ಷಣ ಪಡೆದಿರುವಾಗಲೂ ಇವರನ್ನು ಧರ್ಮದ ಹೆಸರಿನಲ್ಲಿ ವಂಚಿಸಲು ಸಾಧ್ಯವೇ?
ದೇಶದಲ್ಲಿ ಪರಿಶಿಷ್ಟ ಜಾತಿಗೆೆ ಮೀಸಲಾದ ಹುದ್ದೆಗಳಲ್ಲಿ ಕೇವಲ ಶೇ.15ರಷ್ಟು ಭರ್ತಿ ಮಾಡಲಾಗಿದೆ. ಶೇ.85ರಷ್ಟು ಖಾಲಿ ಉಳಿದಿವೆ. ಪರಿಶಿಷ್ಟ ವರ್ಗಗಳಿಗೆ ಮೀಸಲಾದ ಹುದ್ದೆಗಳಲ್ಲಿ ಶೇ.5ರಷ್ಟು ಮಾತ್ರ ಭರ್ತಿ ಆಗಿವೆ. ಶೇ.95ರಷ್ಟನ್ನು ಖಾಲಿ ಉಳಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾದ ಹುದ್ದೆಗಳಲ್ಲಿ ಕೇವಲ ಶೇ.20 ರಷ್ಟನ್ನು ಮಾತ್ರ ಭರ್ತಿ ಮಾಡಿ ಶೇ.80ರಷ್ಟನ್ನು ಖಾಲಿ ಉಳಿಸಿದ್ದಾರೆ. ವಿದ್ಯಾವಂತ ಪರಿಶಿಷ್ಟ ಜಾತಿಯ, ವರ್ಗದ ಮತ್ತು ಹಿಂದುಳಿದ ಸಮುದಾಯಗಳ ಯುವಕ ಯುವತಿಯರು ಎಲ್ಲಿಗೆ ಹೋದರು? ಯಾಕೆ ಅವರ ಪಾಲಿನ ಈ ಹುದ್ದೆಗಳನ್ನು ಖಾಲಿ ಉಳಿಸಲಾಗಿದೆ.
ಹಿಂದೂ ಹೃದಯ ಸಾಮ್ರಾಟರು ಎಲ್ಲಿ ಹೋದರು? ಏಕೆ ಶೇ.80ರಷ್ಟು ಹಿಂದೂಗಳಿಗೆ ಮೀಸಲಾದ ಹುದ್ದೆಗಳಿನ್ನೂ ಖಾಲಿ ಉಳಿದಿವೆ? ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಕುರಿತಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿ ಗಳಾಗಿದ್ದಾಗ ಒಂದು ಮಾತು ಹೇಳಿದ್ದರು. ನಮ್ಮ ಪೌರ ಕಾರ್ಮಿಕರು ಸಾವಿರಾರು ವರ್ಷಗಳಿಂದ ಮಲ ತೆಗೆಯುವ, ಬೀದಿ ಕಸ ಗುಡಿಸುವ ಕೆಲಸಗಳನ್ನು ಮಾಡುತ್ತಿರುವುದು ಯಾವುದೇ ಒತ್ತಡ ಹಾಗೂ ಅನಿವಾರ್ಯದಿಂದ ಅಲ್ಲ. ಈ ಕೆಲಸ ಮಾಡುವುದರಿಂದ ಅವರಿಗೆ ಆಧ್ಯಾತ್ಮಿಕವಾಗಿ ಮುಕ್ತಿ ಸಿಗುತ್ತದೆ. ಈ ಕಾರಣದಿಂದ ಅವರೆಲ್ಲಾ ಇನ್ನೂ ಅದೇ ಕೆಲಸ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ಆರೋಗ್ಯವಂತ ಆಲೋಚನೆಯುಳ್ಳ ಯಾರಾದರೂ ಹೀಗೆ ಹೇಳಲು ಸಾಧ್ಯವೇ? ಅದಕ್ಕೇ ಹೇಳಿದ್ದು ಇವರು ಹೇಳುವ ಹಿಂದುತ್ವ ಮತ್ತು ಚಾತುರ್ವರ್ಣದ ಶೋಷಣೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಜಾತಿ ವ್ಯವಸ್ಥೆ ಅಳಿಸಿ ಹೋದರೆ ಇವರು ಹೇಳುವ ಹಿಂದುತ್ವಕ್ಕೆ ಅಸ್ತಿತ್ವವೇ ಇರುವುದಿಲ್ಲ.
ಆದ್ದರಿಂದ ಅವರು ಈ ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಜಾತಿ ಸರ್ವನಾಶ ಆಗದ ಹೊರತು ಈ ದೇಶದ ದಲಿತ ಸಮೂಹಕ್ಕೆ ಮತ್ತು ಶೂದ್ರ ಸಮೂಹಕ್ಕೆ ಸಾಮಾಜಿಕ ಮತ್ತು ನೈಸರ್ಗಿಕ ನ್ಯಾಯ ಸಿಗುವುದಿಲ್ಲ. ಬದುಕಿನ ಅವಕಾಶಗಳು ಹೆಚ್ಚಾಗುವುದಿಲ್ಲ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಗಾಂಧಿ ಅಪ್ಪಟ ಹಿಂದೂ ಆಗಿದ್ದರು. ಅವರು ಜಾತಿ ವ್ಯವಸ್ಥೆಯ ನಾಶದ ಬಗ್ಗೆಯೂ ಹೇಳುತ್ತಿರಲಿಲ್ಲ. ಆದರೂ ಅವರು ಗಾಂಧಿಯನ್ನು ಕೊಂದರು. ರಾಮರಾಜ್ಯದಲ್ಲಿ, ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದ ಗಾಂಧಿಯನ್ನೂ ಅವರು ಕೊಂದಿದ್ದು ಏಕೆಂದರೆ, ಗಾಂಧಿ ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕೊಡಬೇಕು ಎಂದು ಹೋರಾಟ ನಡೆಸಿದ್ದರು.
ದಲಿತ ಸಮೂಹಕ್ಕೆ ಹರಿಜನ ಎಂದು ಹೆಸರಿಟ್ಟು ಅವರನ್ನು ಮನುಷ್ಯರಂತೆ ಕಾಣಿ ಎಂದು ಹೋರಾಟ ನಡೆಸಿದ್ದ ಕಾರಣಕ್ಕೇ ಅವರನ್ನು ಕೊಲ್ಲಲಾಯಿತು. ಭಾರತ ಪಾಕಿಸ್ತಾನ ವಿಭಜನೆ ಆಗುವ ಮೊದಲು ಮೂರು ಬಾರಿ ಬಳಿಕ ಎರಡು ಬಾರಿ ಮಹಾತ್ಮಾ ಗಾಂಧಿಯವರ ಮೇಲೆ ದಾಳಿ ನಡೆಸಲಾಗಿತ್ತು. ಕೊನೆಗೆ ಕೊಲೆ ಮಾಡಿದರು. ಆದ್ದರಿಂದ ನಾನು ಸ್ಪಷ್ಟವಾಗಿ ಹೇಳಲು ಇಚ್ಛಿಸುತ್ತೇನೆ. ಆರೆಸ್ಸೆಸ್‌ನ ನಿಜವಾದ ಟಾರ್ಗೆಟ್ ಮುಸ್ಲಿಮರಲ್ಲ. ಅವರ ನಿಜವಾದ ಟಾರ್ಗೆಟ್ ಹಿಂದೂಗಳೇ.
► ಬಂಡವಾಳಶಾಹಿ ವ್ಯವಸ್ಥೆ ತನ್ನ ಅಂತಿಮ ಹಂತದಲ್ಲಿದೆ ಎಂದು ನೀವು ಪ್ರತಿಪಾದಿಸಿದ್ದನ್ನು ಕೇಳಿದ್ದೇನೆ. ಆದರೆ, ಈ ಕ್ಯಾಪಿಟಲಿಸಂ ಇನ್ನೂ ವಿಪರೀತದ ಹಂತಕ್ಕೆ ಹೋಗುತ್ತಿದೆ ಎನ್ನುವ ವಿಶ್ಲೇಷಣೆಗಳೂ ಇವೆಯಲ್ಲಾ?
ನಾಲ್ಕೈದು ದಿನಗಳ ಹಿಂದೆ ರಾಜಸ್ಥಾನದ ಹಿಂದುಳಿದ ಸಮುದಾಯಕ್ಕೆ ಸೇರಿದ ಶಿಕ್ಷಕಿಯೊಬ್ಬರು ದಿಲ್ಲಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡರು. ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅರೆಕಾಲಿಕ ಶಿಕ್ಷಕರು ತಮ್ಮ ಹುದ್ದೆ ಖಾಯಂಗೊಳ್ಳದಿರುವುದರಿಂದ ಬೇಸತ್ತಿದ್ದಾರೆ. ಅವರಲ್ಲಿ ಒಬ್ಬ ಶಿಕ್ಷಕರು ಮೊನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ನಮ್ಮ ಈ ಕ್ಷಣದ ಬಂಡವಾಳಶಾಹಿ ಆಳುವ ವರ್ಗದ ಸ್ವರೂಪ. 18 ಮತ್ತು 19ನೇ ಶತಮಾನದ ಯುರೋಪಿಯನ್ ಬಂಡವಾಳಶಾಹಿಗೂ ಸದ್ಯ ಭಾರತದಲ್ಲಿ ಆಚರಣೆಯಲ್ಲಿರುವ ಬಂಡವಾಳಶಾಹಿ ಆಳುವ ವರ್ಗದ ಸ್ವರೂಪಕ್ಕೂ ಬಹಳ ವ್ಯತ್ಯಾಸವಿದೆ.
ಯುರೋಪಿಯನ್ ಮಾದರಿಯ ಬಂಡವಾಳಶಾಹಿ ನಮ್ಮ ಸಮಾಜದಲ್ಲಿ ಇದ್ದಂಥ ಶೋಷಿತ ಊಳಿಗಮಾನ್ಯ ಕ್ರೌರ್ಯವನ್ನು ಒಂದು ಹಂತಕ್ಕೆ ಅಳಿಸಿ ಹಾಕಿತ್ತು. 8 ಗಂಟೆ ಉದ್ಯೋಗ, ಇನ್ನಿತರ ಸವಲತ್ತು, ಹಕ್ಕು ಮತ್ತು ಅನುಕೂಲಗಳನ್ನು ಶ್ರಮಿಕ ಹಾಗೂ ಕಾರ್ಮಿಕ ವರ್ಗಕ್ಕೆ ಒದಗಿಸಿತ್ತು. ಆದರೆ, ಈಗ ಭಾರತದಲ್ಲಿ ಅಸಾಧ್ಯ ಪ್ರಮಾಣದ ಉದ್ಯೋಗಗಳನ್ನು ಕಸಿಯುವ, ದಿನಕ್ಕೆ 12 ಗಂಟೆ ಉದ್ಯೋಗ ವನ್ನು ಕಡ್ಡಾಯಗೊಳಿಸುತ್ತಲೇ ಸಂಬಳವನ್ನು ನಿರಂತರವಾಗಿ ಕಡಿಮೆ ಮಾಡುವ ಕ್ರೌರ್ಯವನ್ನು ಆಚರಿಸಲಾಗುತ್ತಿದೆ.
ಹಲವು ವರ್ಷ ಗಳಿಂದ ದುಡಿದ ಅರೆಕಾಲಿಕ ಶಿಕ್ಷಕರುಗಳು ಕೆಲಸ ಬಿಡುವಂತೆ ಮಾಡುತ್ತಿರುವ ಹೊತ್ತಲ್ಲೇ ಇವರ ಸ್ಥಾನಗಳಿಗೆ ಆರೆಸ್ಸೆಸ್‌ನಿಂದ ಪ್ರಭಾವಿತರಾದ ಶಿಕ್ಷಕರನ್ನು ತುಂಬಿಕೊಳ್ಳಲಾಗುತ್ತಿದೆ.
► ಇವತ್ತು ಆಚರಣೆಯಲ್ಲಿದೆ ಎಂದು ಹೇಳಲಾಗುತ್ತಿರುವ ಕ್ರೋನಿ ಕ್ಯಾಪಿಟಲಿಸಂ(ಏಕಸ್ವಾಮ್ಯ ಬಂಡವಾಳಶಾಹಿ)ಗೂ ಧಾರ್ಮಿಕ ರಾಷ್ಟ್ರೀಯತೆಗೂ ನಡುವೆ ಒಳ ಒಪ್ಪಂದ ಇದೆ ಎನ್ನಬಹುದಾ?
ಇವೆರಡೂ ಬೇರೆ ಬೇರೆ ಅಲ್ಲವೇ ಅಲ್ಲ. ಇವತ್ತು ಬಿಜೆಪಿ ಮತ್ತು ಆರೆಸ್ಸೆಸ್ ಹೇಳುತ್ತಿರುವ ಹಿಂದುತ್ವ ಬಹುಸಂಖ್ಯಾತ ಹಿಂದೂಗಳ ವಿರೋಧಿಯಾಗಿದೆ. ಕ್ರೋನಿ ಕ್ಯಾಪಿಟಲಿಸಂ ಕೂಡ ಬಹುಸಂಖ್ಯಾತ ಹಿಂದೂಗಳ ಬದುಕನ್ನು ಸರ್ವನಾಶ ಮಾಡುತ್ತಿದೆ. ಹಿಂದುಳಿದ ಸಮುದಾಯಗಳು ಮತ್ತು ಮಹಿಳಾ ಹಕ್ಕುಗಳನ್ನು ಸಾರಾಸಗಟಾಗಿ ನಿರಾಕರಿಸುವ ಹಿಂದುತ್ವದ ಮಾದರಿಯನ್ನು ಬಿಜೆಪಿ ಪರಿವಾರ ಪ್ರತಿಪಾದಿಸುತ್ತಿದೆ.
26 ನವೆಂಬರ್ 1949 ರಂದು ಭಾರತದ ಸಂವಿಧಾನವನ್ನು ಅಂಗೀಕ ರಿಸಲಾಯಿತು. ಇದಾಗಿ ನಾಲ್ಕು ದಿನಗಳ ಬಳಿಕ ಆರೆಸ್ಸೆಸ್ ತನ್ನ ಮುಖವಾಣಿ ಆರ್ಗನೈಸರ್‌ನಲ್ಲಿ ಈ ಸಂವಿಧಾನದ ಅಳವಡಿಕೆ ಯನ್ನು ಸ್ಪಷ್ಟ ಮಾತುಗಳಿಂದ ವಿರೋಧಿಸಿದ್ದು ಮಾತ್ರವಲ್ಲ, ಸಾವಿರಾರು ವರ್ಷಗಳ ಹಳೆಯದಾದ ಮನುಸ್ಮತಿ ತಮ್ಮ ಸಂವಿಧಾನ ಆಗಬೇಕು ಎಂದು ಅದು ತನ್ನ ಸಂಪಾದಕೀಯದಲ್ಲಿ ಪ್ರತಿಪಾದಿಸಿತ್ತು. ಗೂಗಲ್‌ಗೆ ಹೋಗಿ ಮನುಸ್ಮತಿಯ ಅಧ್ಯಾಯಗಳನ್ನು ಡೌನ್‌ಲೋಡ್ ಮಾಡಿಕೊಂಡು ಓದಿನೋಡಿ. ಇದು ಬಹುಸಂಖ್ಯಾತ ಹಿಂದೂಗಳ ವಿರೋಧಿ. ಮನುಸ್ಮತಿ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್ ವಿರೋಧಿಯಲ್ಲ. ಅದು ಹಿಂದೂಗಳ ವಿರೋಧಿ. ಹಿಂದೂಗಳಲ್ಲೇ ಶೇ.80ರಷ್ಟಿರುವ ಹಿಂದುಳಿದ ವರ್ಗಗಳ ಮತ್ತು ಮಹಿಳೆಯರ ವಿರೋಧಿಯಾಗಿದೆ. ಪ್ರಾಣಿಗಳಿಗೆ ಇರುವ ಹಕ್ಕುಗಳೂ ಕೂಡ ಮನುಸ್ಮತಿಯಲ್ಲಿ ಮಹಿಳೆಯರಿಗೆ ಇಲ್ಲ.
► ಆರೆಸ್ಸೆಸ್‌ನಲ್ಲೂ ಮಹಿಳಾ ಸೇವಿಕಾ ಸಂಘ ಇದೆಯಲ್ಲಾ?
ಖಂಡಿತಾ ಇದೆ. ಆದರೆ ಇಲ್ಲೊಂದು ವ್ಯತ್ಯಾಸ ಗಮನಿಸಿ. ಆರೆಸ್ಸೆಸ್ ಎಂದರೆ ರಾಷ್ಟ್ರೀಯ ಸ್ವಯಂಸೇವಕರ ಸಂಘ. ಮಹಿಳೆಯರಿಗೆ ಸೇವಿಕಾ ಸಂಘ ಎಂದು ಹೆಸರಿಡಲಾಗಿದೆ. ಅಂದರೆ, ಆರೆಸ್ಸೆಸ್‌ನಲ್ಲಿರುವ ಮಹಿಳೆಯರಿಗೆ ಸ್ವಯಂ ಸೇವಕರು ಎನ್ನುವ ಸ್ಥಾನಮಾನವನ್ನೂ ನಿರಾಕರಿಸಲಾಗಿದೆ. ಇವರು ಏನಿದ್ದರೂ ಸೇವಕರು. ರಾಷ್ಟ್ರೀಯ ಸೇವಿಕಾ ಸಂಘ.
► ಹಾಗಾದರೆ ಭಾರತದಲ್ಲಿನ ಈ ಧರ್ಮಾಧಾರಿತ ರಾಷ್ಟ್ರೀಯತೆ ಮತ್ತು ಧರ್ಮಾಧಾರಿತ ರಾಷ್ಟ್ರೀಯವಾದ ಮತ್ತು ಬಂಡವಾಳವಾದದ ಮುಂದಿನ ಭವಿಷ್ಯ ಏನು?
ಇಡೀ ವಿಶ್ವದಲ್ಲಿ ಬಂಡವಾಳಶಾಹಿ ಕುಸಿಯುತ್ತಿದೆ. ಜಾಗತೀಕರಣ ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಕ್ಯಾಪಿಟಲಿಸಮ್ ತನ್ನೊಳಗೇ ಸಂಘರ್ಷ ಎದುರಿಸುತ್ತಾ ನೆಲಕಚ್ಚುತ್ತಿದೆ. ಇಡೀ ವಿಶ್ವದಲ್ಲಿ ಇದು ನಡೆಯುತ್ತಿದೆ.ಅಫ್ಘಾನಿಸ್ತಾನ ದಿಂದ ಅಮೆರಿಕ ಕಾಲು ಕಿತ್ತಿ�