×
Ad

ಬಂಟ್ವಾಳ ವಿಧಾನಸಭಾ ಕ್ಷೇತ್ರಲ್ಲಿ 'ಮಹಾ ಅಭಿಯಾನ' ಯಶಸ್ಸು: ರಾಜೇಶ್ ನಾಯ್ಕ್

Update: 2023-05-01 12:55 IST

ಬಂಟ್ವಾಳ, ಮೇ 1: ಬಂಟ್ವಾಳ ವಿಧಾನಸಭಾ ಕ್ಷೇತ್ರಲ್ಲಿ ನಡೆದ 'ಮಹಾ ಅಭಿಯಾನ' ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಮನೆ ಮನೆ ಸಂಪರ್ಕ ಮಾಡುವ ಮಹಾ ಸಂಪರ್ಕ ಅಭಿಯಾನ ವನ್ನು ರವಿವಾರ ಹಮ್ಮಿಕೊಂಡಿದ್ದು, ಪಕ್ಷದ ಜವಾಬ್ದಾರಿ ಇರುವ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತೀ ಮತಗಟ್ಟೆಗಳಲ್ಲಿ ಒಟ್ಟು ಸೇರಿ ಸೂಕ್ತ ಯೋಜನೆಯೊಡನೆ ಮನೆ- ಮನೆ ಪ್ರಚಾರವನ್ನು ಕ್ಷೇತ್ರದ 249 ಬೂತುಗಳಲ್ಲಿ ಯಶಸ್ವಿಗೊಳಿಸಿದ್ದಾರೆ. ಇದಕ್ಕಾಗಿ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.

ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 150 ಕ್ಕೂ ಅಧಿಕ ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲುವ ಸಲುವಾಗಿ ಬೂತು ಕಾರ್ಯಕರ್ತರಿಂದ ರಾಷ್ಟ್ರೀಯ ನಾಯಕರವರೆಗೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಯಾಗಿಸಿದ್ದಾರೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಮನೆ ಸಂಪರ್ಕ ಮಾಡುವ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮ ಈ ಬಾರಿಯ ಚುನಾವಣೆಗೆ ಶಕ್ತಿ ನೀಡಲಿದ್ದು, ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಗೆಲುವಿಗೆ ಪೂರಕವಾಗಲಿದೆ. ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದ್ದು, ಗ್ರಾಮ ಗ್ರಾಮಗಳಲ್ಲಿ ಬಿಜೆಪಿಯತ್ತ ಜನ ಒಲವು ತೋರಿದ್ದಾರೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಮತ್ತೆ ಮತದಾರರಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Similar News