×
Ad

ತಾನು ಪ್ರಕಟಿಸಿದ ಸುಳ್ಳುಸುದ್ದಿಯನ್ನು ಅಳಿಸದೇ ಅಪರಿಚಿತ ವೆಬ್‌ಸೈಟ್‌ ಅನ್ನು 'ದೂರಿದ' ANI ಸುದ್ದಿಸಂಸ್ಥೆ !

Update: 2023-05-01 22:28 IST

ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಶವಗಳನ್ನು ಅತ್ಯಾಚಾರ ಮಾಡುತ್ತಿರುವ ಸಂಸ್ಕೃತಿ ಹೆಚ್ಚುತ್ತಿದ್ದು, ಈ ಕಾರಣದಿಂದಾಗಿ ಎಲ್ಲಿ ಪೋಷಕರು ಭಯದಿಂದ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆಂಬ ವರದಿಗಳನ್ನು ಹಲವಾರು ಮಾಧ್ಯಮಗಳು ಪ್ರಕಟಿಸಿತ್ತು. ಇದೊಂದು ಸುಳ್ಳುಸುದ್ದಿಯಾಗಿದ್ದು, ಚಿತ್ರದಲ್ಲಿದ್ದ ಸಮಾಧಿ ಹೈದರಾಬಾದ್‌ ನದ್ದಾಗಿದೆ ಎಂದು ಬಳಿಕ altnews.in ವರದಿ ಮಾಡಿತ್ತು. ಇದೀಗ  ವರದಿಯ ಸತ್ಯಾಂಶವನ್ನು ಪ್ರಕಟಿಸುವ ವೇಳೆ ತನ್ನ ವೈಫಲ್ಯ ಮರೆತು ಸುಳ್ಳು ಸುದ್ದಿಯನ್ನು ಅಳಿಸದೇ ಇನ್ನೊಂದು ಮಾಧ್ಯಮವನ್ನು 'ದೂರಿದ' ಎಎನ್‌ಐ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೀಡಾಗಿದೆ. 

ಎಎನ್‌ಐಯ ಈ ಇಬ್ಬಗೆ ನೀತಿಯನ್ನು ಆಲ್ಟ್‌ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. "ತಾವು ಹಾಕಿರುವ ಲೇಖನವನ್ನು ಇನ್ನೂ ತೆಗೆದುಹಾಕದ 'ದಕ್ಷಿಣ ಏಷ್ಯಾದ ಪ್ರಮುಖ ಮಲ್ಟಿಮೀಡಿಯಾ ಸುದ್ದಿಸಂಸ್ಥೆ' ಎಎನ್‌ಐ ಅಪರಿಚಿತ ವೆಬ್‌ಸೈಟ್‌ ನ ವರದಿಯನ್ನು ದೂಷಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ಸದ್ಯ ಎಲ್ಲಾ ನ್ಯೂಸ್‌ ಚಾನೆಲ್‌ಗಳು ವಾಟ್ಸಪ್‌ ನಲ್ಲಿ ಫಾರ್ವರ್ಡ್‌ ಆಗಿರುವ ಮೆಸೇಜ್‌ ಗಳನ್ನು ಮುಂದಿಟ್ಟುಕೊಂಡು ವರದಿಗಳನ್ನು ಪ್ರಕಟಿಸುವ ಹಂತಕ್ಕೆ ತಲುಪಿದೆ ಎಂದು ಬಳಕೆದಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News