×
Ad

ಕೆಲಸದ ಅವಧಿ ಹೆಚ್ಚಳವನ್ನು ಹಿಂಪಡೆದ ತಮಿಳುನಾಡು ಸರ್ಕಾರ: ಕಾರ್ಮಿಕರ ಕಲ್ಯಾಣದೊಂದಿಗೆ ರಾಜಿ ಇಲ್ಲವೆಂದ ಸಿಎಂ ಸ್ಟಾಲಿನ್

Update: 2023-05-01 23:23 IST

ಚೆನ್ನೈ: ಕಾರ್ಮಿಕರ ಹಿತದೃಷ್ಟಿಯಿಂದ ಕೆಲಸದ ಅವಧಿಯನ್ನು ಪ್ರತಿ ದಿನ 12 ಗಂಟೆಗೆ ವಿಸ್ತರಿಸಿದ್ದ ಕಾರ್ಖಾನೆಗಳು (ತಿದ್ದುಪಡಿ) ಕಾಯ್ದೆ, 2023 ಅನ್ನು ಹಿಂಪಡೆಯಲಾಗಿದೆ ಎಂದು ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ‌. ಸ್ಟಾಲಿನ್ ಪ್ರಕಟಿಸಿದ್ದಾರೆ.

ಮೇ ದಿನ ಉದ್ಯಾನವನದಲ್ಲಿ ಮೇ ದಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಸುಧಾರಣೆಗಳನ್ನು ಜಾರಿಗೊಳಿಸಲಷ್ಟೇ ಧೈರ್ಯವಿದ್ದರೆ ಸಾಲದು, ಬದಲಿಗೆ ಸಮಸ್ಯೆ ಕುರಿತು ಜನಾಭಿಪ್ರಾಯವನ್ನು ಒಪ್ಪಿಕೊಳ್ಳುವುದಕ್ಕೂ ಧೈರ್ಯವಿರಬೇಕು. ಹಲವಾರು ಕಾರ್ಮಿಕ ಸಂಘಟನೆಗಳು ವಿವಾದಾತ್ಮಕ ಕಾಯ್ದೆಯ ಬಗ್ಗೆ ತಕರಾರು ವ್ಯಕ್ತಪಡಿಸಿರುವುದರಿಂದ ಅದನ್ನು ಹಿಂಪಡೆಯಲಾಗಿದೆ" ಎಂದು ಹೇಳಿದ್ದಾರೆ.

ಕಾರ್ಮಿಕರ ಹಿತದೃಷ್ಟಿಯಿಂದ  ಕಾರ್ಮಿಕರಿಗೆ 8 ಗಂಟೆ ಅವಧಿಯ ಬದಲು 12 ಗಂಟೆ ಅವಧಿಗೆ ವಿಸ್ತರಣೆಗೊಂಡಿದ್ದ ಅನುಕೂಲಕರ ಕೆಲಸದ ಅವಧಿಯನ್ನೊಳಗೊಂಡಿದ್ದ ಕಾರ್ಖಾನೆಗಳು (ತಿದ್ದುಪಡಿ) ಕಾಯ್ದೆ, 2023 ಅನ್ನು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ‌.ಸ್ಟಾಲಿನ್ ಪ್ರಕಟಿಸಿದ್ದಾರೆ.

Similar News