×
Ad

ಕಾಂಗ್ರೆಸ್ ಪಕ್ಷವೇ ಈ ಬಾರಿ ಅಧಿಕಾರಕ್ಕೆ ಬರುತ್ತದೆ: ವೀರಪ್ಪ ಮೊಯ್ಲಿ

ಕಾರ್ಕಳದಲ್ಲಿ ಕಾಲ್ನಡಿಗೆ ಜಾಥ, ಬೃಹತ್ ಸಮಾವೇಶ

Update: 2023-05-02 19:20 IST

ಕಾರ್ಕಳ: ಕಾಂಗ್ರೆಸ್ ಪಕ್ಷವೇ ಈ ಬಾರಿ ಕಾರ್ಕಳದಲ್ಲಿ ಅಧಿಕಾರಕ್ಕೆ ಬರುತ್ತದೆ ಇದು ನನ್ನ ಶಪಥ ಈ ಶಪಥ ಈ ಬಾರಿ ಖಂಡಿತ ಈಡೇರಿಸುವ ದೃಢಸಂಕಲ್ಪದಲ್ಲಿ ಕಾರ್ಕಳದ ಮತದಾರರು ಪೂರ್ಣ ಸನ್ನದ್ಧರಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ  ಹೇಳಿದರು.

ಅವರು ಕಾರ್ಕಳ ಕಾಂಗ್ರೆಸ್ ವಿಧಾನ ಸಭಾ ಕ್ಷೇತ್ರದ  ಕಾಲ್ನಡಿಗೆ ಜಾಥ ಹಾಗೂ ಬೃಹತ್ ಸಮಾವೇಶದಲ್ಲಿ  ಭಾಗವಹಿಸಿ ಮಾತನಾಡಿದರು.

ನ್ಯಾಯ ಸತ್ಯಕ್ಕೋಸ್ಕರ ಕಾಂಗ್ರೆಸ್ ಪಕ್ಷ ಹೋರಾಡಿದೆ. ಉಳುವವನೆ ಭೂಮಿಯೊಡೆಯ ಕಾನೂನು ಜಾರಿಗೊಳಿ ಸುವ ಮೂಲಕ ಬಡವರಿಗೆ ಜಾಗ ಒದಗಿಸಿ ಮನೆಯನ್ನು ಒದಗಿಸಿದೆ. ಆಸ್ಪತ್ರೆ, ರಸ್ತೆ ಶಾಲೆಗಳು ಮೂಲ ಸೌಕರ್ಯ ಗಳನ್ನು ಒದಗಿಸುವ ಮೂಲಕ ಜನರ ಪಾಲಿಗೆ ವರವಾಗಿತ್ತು. ‌ವಿವಿಧೆಡೆ ಎಸ್ಇಝೆಡ್, ಎಂಆರ್ ಪಿಎಲ್,  ಐಟಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಕಾಂಗ್ರೆಸ್ ನಿರುದ್ಯೋಗಿಗಳಿಗೆ  ಉದ್ಯೋಗ ನೀಡಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ವರ್ಷಕ್ಕೆ ರಾಜ್ಯದ  6.5 ಲಕ್ಷಕೋಟಿ ಹಣ  ತೆರಿಗೆ ಹಣ ಹೋಗುತ್ತದೆ . ಆದರೆ  ರಾಜ್ಯಕ್ಕೆ ಕೇವಲ 50000 ಕೋಟಿ ಹಣವನ್ನು ಮಾತ್ರ ಕೆಂದ್ರ ಸರಕಾರ ನೀಡಿ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 6  ಗ್ಯಾರಂಟಿ  ಪ್ರನಾಳಿಕೆಯನ್ನು ಈಡೇರಿಸುತ್ತೇವೆ ಎಂದರು.

ಕಾಂಗ್ರೆಸ್ ಆಭ್ಯರ್ಥಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ನಾನು ನಿಮ್ಮ ಸೇವೆಗಾಗಿ ಬಂದಿದ್ದೇನೆ. ನಾವು ಚುನಾವಣೆಯನ್ನು ಗೆಲ್ಲಬೇಕು. ನಮ್ಮ ಧರ್ಮ ಮತ್ತು ಸತ್ಯ ಗೆಲ್ಲಬೇಕು ನಮಗೆ ವಾಮ ಮಾರ್ಗದ ಜಯ ಬೇಡ ಸತ್ಯ ಧರ್ಮದ ಜಯ ಬೇಕು. ನಾನು ಈ ಬಾರಿ ಮಾತ್ರ ನಾನು ನಿಮ್ಮಲ್ಲಿ ಮತಯಾಚಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಮತದಾರರೇ ನನಗೆ ಕರೆದು ಮತ ಹಾಕುವಂತೆ ಕೆಲಸ ಮಾಡಿ ತೋರಿಸುತ್ತೇನೆ. ಕಾರ್ಕಳದಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಐಟಿ ಪಾರ್ಕ್ ಮಾಡುವ ಉದ್ದೇಶ ಹೊಂದಿದ್ದು ನಿಮ್ಮ ಮತದ ಸಹಕಾರ ಅಗತ್ಯ. ಕಾಂಗ್ರೆಸ್ ಕಟ್ಟ ಬಡವರ ಪರವಾಗಿರುವ ಪಕ್ಷವಾಗಿದೆ. ಬಡ ವ್ಯಕ್ತಿಗೆ ನ್ಯಾಯ ಒದಗಿಸಲು ಪಕ್ಷವಾಗಿದೆ ಎಂದರು.

ಕೆಪಿಸಿಸಿ  ಪ್ರಧಾನ ಕಾರ್ಯದರ್ಶಿ ಪದ್ಮರಾಜ್  ರಾಮಯ್ಯ, ಸುಧೀರ್ ಕುಮಾರ್ ಮುರೋಳಿ ಸಂದರ್ಭದಲ್ಲಿ ಮಾತನಾಡಿದರು. ಶೇಖರ ಮಡಿವಾಳ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಡಿ ಆರ್ ರಾಜು,  ಜಿ.ಎ ಬಾವ,  ಹರ್ಷಾ ಮೊಯ್ಲಿ, ಸುಭಿತ್ ಎನ್ಆರ್, ಕಾಂಗ್ರೆಸ್ ಮುಖಂಡ ರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ನವೀನ ಅಡ್ಯಾಂತಾಯ,  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ , ಅನಿತಾ ಡಿಸೋಜ, ಪ್ರೇಮ ಕುಮಾರ್ ಹೊಸ್ಮಾರ್, ಕೇರಳ ಸಂಸದ ಪ್ರತಾಪನ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಎ ಗಫೂರ್, ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ, ಮಂಜುನಾಥ ಪೂಜಾರಿ, ಸುರೇಂದ್ರ ಶೆಟ್ಟಿ, ಪವರ್ ಟಿವಿ ಸಂಸ್ಥಾಪಕ ರಾಕೇಶ್ ಶೆಟ್ಟಿ, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ, ದೇವಿಪ್ರಸಾದ್ ಶೆಟ್ಟಿ, ಅಣ್ಣಪ್ಪ ನಕ್ರೆ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್, ಉದ್ಯಮಿ ರಹೀಂ ಎಣ್ಣೆಹೊಳೆ, ನೀರೆ ಕ್ರಷ್ಣ ಶೆಟ್ಟಿ ,ರಜನಿ ಹೆಬ್ಬಾರ್ ,ಚಂದ್ರಶೇಖರ್ ಬಾಯರಿ , ಉಪಸ್ಥಿತರಿದ್ದರು. ಶುಭಧರಾವ್  ಕಾರ್ಯಕ್ರಮ ನಿರೂಪಿಸಿದರು.

ಕಾಂಗ್ರೆಸ್ ಪಕ್ಷದ ಕಾಲ್ನಡಿಗೆ ಜಾಥ ಸ್ವರಾಜ್ಯ ಮೈದಾನದಿಂದ  ಕಾರ್ಕಳ ಬಂಡಿಮಠ ಮೈದಾನದ ವರೆಗೆ ನಡೆಯಿತು. ಪಾದಯಾತ್ರೆಗೆ ಜನಸಾಗರವೇ ಹರಿದು ಬಂದಿರುವುದು ವಿಶೇಷ.

Similar News