ಕ್ರಿಕೆಟ್ ಬೆಟ್ಟಿಂಗ್ ಜೂಜಾಟ: ಓರ್ವನ ಬಂಧನ
Update: 2023-05-02 20:26 IST
ಕೋಟ: ಅಚ್ಲಾಡಿ ಗ್ರಾಮದ ಮಧುವನ ರೈಲ್ವೆ ಸೇತುವೆ ಬಳಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಿಸಿದಂತೆ ಓರ್ವನನ್ನು ಕೋಟ ಪೊಲೀಸರು ಮೇ 1ರಂದು ಬಂಧಿಸಿದ್ದಾರೆ.
ಕೋಟತಟ್ಟುವಿನ ಉಮೇಶ ಪೂಜಾರಿ(34) ಬಂಧಿತ ಆರೋಪಿ. ಮೊಬೈಲ್ ನಲ್ಲಿ ವೆಬ್‌ಸೈಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವುದು ಕಂಡು ಬಂದಿದ್ದು, ದಾಳಿ ನಡೆಸಿದ ಪೊಲೀಸರು ಮೊಬೈಲ್ ಜೂಜಾಟದಲ್ಲಿ ನಿರತರಾಗಿದ್ದ ಉಮೇಶ ಪೂಜಾರಿಯನ್ನು ಬಂಧಿಸಿದರು. ಈತನಿಂದ ಮೊಬೈಲ್ ಮತ್ತು ಜೂಜಾಟಕ್ಕೆ ಬಳಸಿದ 14300ರೂ. ಹಣವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.