ಪ.ಬಂಗಾಳ: ಬಿಜೆಪಿ ಮುಖಂಡನ ಅಪಹರಿಸಿ ಹತ್ಯೆ
ಕೋಲ್ಕತಾ,ಮೇ 2: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅಪಹೃತರಾಗಿದ್ದರೆನ್ನಲಾದ ಸ್ಥಳೀಯ ಬಿಜೆಪಿ ನಾಯಕ ಬಿಜೊಯ್ ಭೂಯಿಯಾ ಅವರ ರಕ್ತಸಿಕ್ತ ಮೃತದೇಹವು ರಸ್ತೆ ಬದಿಯೊಂದರಲ್ಲಿ ಬಳಿ ಪತ್ತೆಯಾಗಿದೆ.
ಟಿಎಂಸಿಯ ಗೂಂಡಾಗಳು ಭೂಯಿಯಾ ಅವರನ್ನು ಹತ್ಯೆಗೈದಿದ್ದಾರೆಂದು ಬಿಜೆಪಿ ಆಪಾದಿಸಿದೆ. ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರಾದ ಭೂಯಿಯಾ ಅವರು ಮನೆಗೆ ವಾಪಸಾಗುತ್ತಿದ್ದಾಗ ಮನೋರಂಜನ್ ಹಝಾರಾ ಹಾಗೂ ಟಿಎಂಸಿಯ ಗೂಂಡಾಗಳು ದಾರಿ ಮಧ್ಯೆ ಅವರ ಮೇಲೆ ದಾಳಿ ನಡೆಸಿದ್ದರು. ಆರಂಭದಲ್ಲಿ ಅವರು ಭೂಯಿಯಾ ಅವರ ಪುತ್ರನಿಗೆ ದಾಳಿಗೆ ಯತ್ನಿಸಿದ್ದು. ಆದರೆ ಆತ ತಪ್ಪಿಸಿಕೊಂಡಿದ್ದ. ಆನಂತರ ಗೂಂಡಾಗಳು ಭೂಯಿಯಾನಿಗೆ ಬಂದೂಕು ತೋರಿಸಿ ಎಳೆದುಕೊಂಡು ಹೋಗಿದ್ದರು. ಕೆಲವು ತಾಸುಗಳ ಬಳಿಕ ಆತನ ಮೃತದೇಹ ಪತ್ತೆಯಾಗಿದೆ’’ ಎಂದು ಬಿಜೆಪಿ ಶಾಸಕ ಅಶೋಕ್ ದಿಂಡಾ ಹೇಳಿದ್ದಾರೆ.
ಟಿಎಂಸಿಯ ಗೂಂಡಾಗಳಿಗೆ ಈ ಪ್ರದೇಶದಲ್ಲಿ ಬಾಂಬ್ ಗಳನ್ನು ಎಸೆದಿದ್ದು, ಅವಿರಗೆ ಪೊಲೀಸರ ಬೆಂಬಲವಿದೆ ಎಂದು ದಿಂಡಾ ಆಪಾದಿಸಿದ್ದಾರೆ.