×
Ad

ಅಮೆರಿಕದಲ್ಲಿ ಧೂಳಿನ ಬಿರುಗಾಳಿಗೆ 6 ಮಂದಿ ಮೃತ್ಯು; 30 ಮಂದಿಗೆ ಗಾಯ

Update: 2023-05-02 23:26 IST

ವಾಷಿಂಗ್ಟನ್, ಮೇ 2: ಅಮೆರಿಕದ ಇಲಿನೋಸಿಸ್ನಲ್ಲಿ ಸೋಮವಾರ ಬೀಸಿದ ಧೂಳಿನ ಬಿರುಗಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದು ಇತರ 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಧೂಳಿನ ಬಿರುಗಾಳಿಯಿಂದಾಗಿ ಈ ಪ್ರದೇಶದಲ್ಲಿ ಶೂನ್ಯ ಗೋಚರತೆ ಉಂಟಾಗಿದ್ದು 80ಕ್ಕೂ ಅಧಿಕ ವಾಹನಗಳು ಅಪಘಾತಕ್ಕೀಡಾದವು. ಬಳಿಕ ಈ ಪ್ರಾಂತದ ಪ್ರಮುಖ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ.

Similar News