×
Ad

ಉಡುಪಿ: ಕಾರಿನಲ್ಲಿ ಬಂದು ಅಂಗಡಿಯಲ್ಲಿದ್ದ ಮೊಬೈಲ್ ಸುಲಿಗೆ

Update: 2023-05-03 20:55 IST

ಉಡುಪಿ, ಮೇ 3: ಕಾರಿನಲ್ಲಿ ಬಂದು ಮೊಬೈಲ್ ಅಂಗಡಿಯ ಕೌಂಟರ್ ಮೇಲಿಟ್ಟಿದ್ದ ಮೊಬೈಲ್ ಕಳವು ಮಾಡಿಕೊಂಡು ಹೋಗಿರುವ ಘಟನೆ ಮೇ 2ರಂದು ರಾತ್ರಿ 9ಗಂಟೆ ಸುಮಾರಿಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾಜ್‌ಟವರ್ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮೊಬೈಲ್ ಅಂಗಡಿಗೆ ಬಂದ ಪ್ರದೀಪ್ ಸ್ಯಾಮುವೆಲ್ ಸದಾನಂದ ಎಂಬವರ ತನ್ನ ಮೊಬೈಲ್‌ನ್ನು ಅಂಗಡಿಯ ಕಂಟೌರ್ ಮೇಲೆ ಇಟ್ಟಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಓರ್ವ ಕೌಂಟರ್ ಮೇಲೆ ಇಟ್ಟಿದ್ದ ಮೊಬೈಲ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಮೊಬೈಲ್‌ನ ಮೌಲ್ಯ 10,000 ರೂ. ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Similar News