×
Ad

​ಮಂಗಳೂರು: ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ವಂಚನೆ

Update: 2023-05-03 21:16 IST

ಮಂಗಳೂರು: ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಎ.29ರಂದು ಅಪರಿಚಿತ ವ್ಯಕ್ತಿ +1(660)6160182 ಸಂಖ್ಯೆಯಿಂದ ವಾಟ್ಸಪ್ ಮೂಲಕ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ, ಟೆಲಿಗ್ರಾಂ ಆ್ಯಪ್‌ನ https:llt.me/Receptionistlakshmi04 ಲಿಂಕ್ ಕಳುಹಿಸಿದ್ದ. ಆನ್‌ಲೈನ್‌ನಲ್ಲಿ ಹಣ ದ್ವಿಗುಣಗೊಳಿಸುವ ಟಾಸ್ಕ್ ಪೂರೈಸುವಂತೆ ತಿಳಿಸಿದ್ದ. ಅದರಂತೆ ದೂರುದಾರರು ಮೊಬೈಲ್ ಬ್ಯಾಂಕಿಂಗ್ ಮೂಲಕ 9000 ರೂ. ವರ್ಗಾಯಿಸಿದ್ದರು. ಅನಂತರ ಅಪರಿಚಿತ ವ್ಯಕ್ತಿ ದೂರದಾರರ ವಿವಿಧ ಬ್ಯಾಂಕ್‌ಗಳ ಖಾತೆಗಳಿಂದ ಹಂತ ಹಂತವಾಗಿ ಎ.29 ಮತ್ತು 30ರಂದು 1.34 ಲಕ್ಷ ರೂ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ. ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

Similar News