ಜಮ್ಮು ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಇಬ್ಬರು ಶಂಕಿತ ಉಗ್ರರು ಸಾವು

Update: 2023-05-03 18:25 GMT

ಶ್ರೀನಗರ, ಮೇ 3: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಬುಧವಾರ ಒಳನುಸುಳುವಿಕೆಯನ್ನು ವಿಫಲಗೊಳಿಸಿರುವ ಭದ್ರತಾ ಪಡೆ ಎನ್‌ಕೌಂಟರ್ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಾಚಿಲ್ ವಲಯದ ಗಡಿ ನಿಯಂತ್ರಣ ರೇಖೆ ಸಮೀಪ ಶಂಕಿತ ಭಯೋತ್ಪಾದಕರು ಒಳನುಸುಳುವ ಸಾಧ್ಯತೆ ಇದೆ ಎಂದು ಕುಪ್ವಾರದ ಎಸ್‌ಎಸ್‌ಪಿಯಿಂದ ಪಡೆದ ನಿರ್ದಿಷ್ಟ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸೋಮವಾರದಿಂದ ಕಟ್ಟೆಚ್ಚರ ವಹಿಸಿತ್ತು ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕರ್ನಲ್ ಎಮ್ರಾನ್ ಮೌಸವಿ ತಿಳಿಸಿದ್ದಾರೆ. 
ಬುಧವಾರ ಬೆಳಗ್ಗೆ ಭದ್ರತಾ ಪಡೆ ಶಂಕಿತ ಭಯೋತ್ಪಾದಕರು ಇರುವುದನ್ನು ಪತ್ತೆ ಮಾಡಿತು ಹಾಗೂ ಎನ್‌ಕೌಂಟರ್ ನಡೆಸಿ ಹತ್ಯೆಗೈದಿತು ಎಂದು ಅವರು ತಿಳಿಸಿದ್ದಾರೆ. 

Similar News