ಪ್ರಧಾನಿ ವಿಶ್ವಗುರು ಅನ್ನುತ್ತಾ ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾರೆ: ತಾರೀಖ್ ಅನ್ವರ್ ಆರೋಪ

ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ

Update: 2023-05-04 17:18 GMT

ಕೊಣಾಜೆ: ಭಾರತ ನಿರುದ್ಯೋಗ, ಬಡತನ, ಭ್ರಷ್ಟಾಚಾರ ಹೆಚ್ಚಿದ್ದರೂ, ಪ್ರಧಾನಿ ವಿಶ್ವಗುರು ಅನ್ನುತ್ತಾ ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಾರೆ. ದೇಶದ ಎಲ್ಲಾ ಆಸ್ತಿಗಳನ್ನು ಉದ್ಯಮಿಗಳ ಪಾಲಾಗುತ್ತಿದೆ. ಇದನ್ನೆಲ್ಲಾ ಮನವರಿಕೆ ಮಾಡಿಕೊಂಡು ಮತದಾನದಲ್ಲಿ ಜನ ಪಾಲ್ಗೊಳ್ಳಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ಹೇಳಿದರು.

ಅವರು ಮುನ್ನೂರು ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ  ಕುತ್ತಾರು ಜಂಕ್ಷನ್ನಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇರಳ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ಪುತ್ರ ಚಾಂಡಿ ಉಮನ್ ಮಾತನಾಡಿ, ರಾಹುಲ್ ಗಾಂಧಿ ಸಂಸದೀಯ ಸ್ಥಾನ ಅನರ್ಹಗೊಳಿಸಿದರು, ಕರ್ನಾಟಕದಲ್ಲಿ 40% ಕಮೀಷನ್ ಇಲ್ಲದೆ ಯೋಜನೆಗಳ ಅನುಷ್ಠಾನ ವಿಲ್ಲ, ದೇಶವನ್ನೇ ಅರಾಜಕತೆಗೆ ದೂಡಿದ ಮೋದಿ ಸರಕಾರ ಇನ್ನು ಕೆಲವೇ ದಿನಗಳು ಮಾತ್ರ, ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿಯೇ ಪ್ರಧಾನಿಯಾಗಿ ಮತ್ತೊಮ್ಮೆ ಸಾಮರಸ್ಯದ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಯು.ಟಿ ಖಾದರ್ ಮಾತನಾಡಿ ಬಿಜೆಪಿಯ ಆಯುಷ್ಯ 10 ದಿನಗಳು ಮಾತ್ರವಿದೆ. ಸಾಯುವ ಬೆಡ್ ನ ಬಿಜೆಪಿಗೆ ಬದುಕಿಸುವ ಆಕ್ಸಿಜನ್ ಎಸ್‌ಡಿಪಿಐ ನೀಡುತ್ತಿದೆ. ಸಮಪಾಲು, ಸಮಬಾಳು ಹಾಗು ಗೌರವಯುತ ವಾತಾವರಣ ವನ್ನು ಪಕ್ಷಕ್ಕೆ ಸೇರ್ಪಡೆಗೊಂಡವರ ಜತೆಗೆ  ಕಾಂಗ್ರೆಸ್ ಮಾಡುತ್ತದೆ. ಖಾದರ್ ಗೆ ಕೊಡುವ ಮತವಲ್ಲ, ಬಡವರಿಗೆ, ಅಶಕ್ತರಿಗೆ  ಕಾರ್ಯಕ್ರಮ ಕೊಡದ ಜನವಿರೋಧಿ ಸರಕಾರದ ವಿರುದ್ಧವಾಗಿ ನೀಡುವ ಮತದಾನ ವಾಗಿದೆ. ಸಿದ್ಧರಾಮಯ್ಯ ಸರಕಾರ ಕೊಟ್ಟ  ಇಂದಿರಾ ಕ್ಯಾಂಟೀನ್, ರೇಷನ್ ಕಾರ್ಡು ಎಲ್ಲವನ್ನೂ ನಿಲ್ಲಿಸಿದ ಸರಕಾರ. ಜನರ ಮನೋಸ್ಥೈರ್ಯ ನೀಡಿ ಬದುಕಿಸಬೇಕಾದ ಸರಕಾರ ಆತ್ಮಹತ್ಯೆಗೆ ಪ್ರಚೋದಿಸಿ ಗುತ್ತಿಗೆ ದಾರರು,  ಪೊಲೀಸರು  ಹಲವರು ಸಾವನ್ನಪ್ಪುವಂತಾಗಿದೆ. ಉಳ್ಳಾಲ ಪೊಲೀಸ್ ಠಾಣೆಗೆ ರೂ.80 ಲಕ್ಷ ಲಂಚ ನೀಡಿ ಠಾಣಾಧಿಕಾರಿಯಾದರೆ ಜನರಿಂದ ಲೂಟಿ ಮಾಡದೆ ಇನ್ನೇನು ಮಾಡುತ್ತಾರೆ? ರೋಲ್ಡ್ ಗೋಲ್ಡ್ ಚಿನ್ನ ಹಾಕಿ ಮದುವೆ ಮಾಡಿಕೊಡಬೇಕಾದ ಕಣ್ಣೀರು ಹಾಕುವಂತಹ ಸ್ಥಿತಿ ಬಿಜೆಪಿಯಿಂದ ಆಗಿದೆ.  ಉಪ್ಪಿನ ಮೇಲೆಯೂ ಟ್ಯಾಕ್ಸ್ ಹಾಕಿದಂತಹ ಅತ್ಯಂತ ಧರಿದ್ರ ಸರಕಾರ. ಹಿಂದೆ ಮಹಾತ್ಮ ಗಾಂಧಿ ಹೋರಾಡಿದಂತಹ ಯಾತನೆಯನ್ನು ಮತ್ತೆ ಬಿಜೆಪಿ ಸಮಾಜಕ್ಕೆ ತಂದೊಡ್ಡಿದೆ. ಜುಲೈನಲ್ಲೇ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿಯನ್ನು ಜಾರಿಗೆ ತರುತ್ತದೆ.  ಒಂದು ವೇಳೆ ಸರಕಾರ ಬಂದು ಜಾರಿಯಾಗದೇ ಇದ್ದಲ್ಲಿ ಸದಸ್ಯತ್ವಕ್ಕೇ ರಾಜೀನಾಮೆ ಕೊಡುತ್ತೇನೆ. ಟೋಲ್ ಮುಕ್ತ ಚತುಷ್ಪಥ ರಸ್ತೆಯ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಲ್ಲಿ  ಮೆಲ್ಕಾರ್ ವರೆಗೂ ಚತುಷ್ಪಥ ರಸ್ತೆಯ ನಿರ್ಮಾಣವಾಗಲಿದೆ. ಸೌಹಾರ್ದ ಮತ್ತು ಅಭಿವೃದ್ಧಿ ಯ ತ್ಯಾಗಕ್ಕೆ ಎಲ್ಲರೂ ಮುಂದಾಗಿರಿ ಎಂದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಸಿದ್ದರಾಮಯ್ಯನವರ ನಂತರ ಯು.ಟಿ ಖಾದರ್ ಅವರೇ ಪ್ರಖರ ನಾಯಕ. ಮುಂದಿನ ಸರಕಾರದಲ್ಲಿ ಖಾದರ್ ಅವರು ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಲಿ ದ್ದಾರೆ‌ . ಸರಳ ವ್ಯಕ್ತಿತ್ವದ ನಾಯಕನಿಗೆ ಮತ ಹಾಕಿ ಗೆಲ್ಲಿಸಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಮುಸಲ್ಮಾನರು ಒಂದು ಮತವನ್ನು ಎಸ್ ಡಿಪಿಐಗೆ ನೀಡಿದಲ್ಲಿ ಅದು ಎರಡು ಮತಗಳಾಗಿ ಬಿಜೆಪಿಗೆ ವರದಾನವಾಗಲಿದೆ.  ಸಮುದಾಯದ ಯುವಕ- ಯುವತಿಯರೇ   ಜಾಗರೂಕರಾಗಿರಿ. ಕ್ಷೇತ್ರದಲ್ಲಿ 30 ವರ್ಷಗಳ ಹಿಂದಿನ ಬೇಡಿಕೆಯನ್ನು ಅವರ ಸುಪುತ್ರ ಯು.ಟಿ ಖಾದರ್ ನೆರವೇರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪುಗೊಂಡ ನಂತರ ಮಂಗಳೂರು ಕ್ಷೇತ್ರಕ್ಕೆ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದರು.

ಅಶ್ರಫ್ ಕೆ.ಸಿ ರೋಡ್  ಮಾತನಾಡಿ, ಮೋದಿ- ಷಾ ದೇಶಭಕ್ತಿ ಬರೀಯ ಬೂಟಾಟಿಕೆ, ಕಾಂಗ್ರೆಸ್ಸಿನದ್ದು ನೈಜ ದೇಶಭಕ್ತಿ. ದೇಶದ ಸಂಪತ್ತನ್ನು ಮಾರುವ ಸಂದರ್ಭ ಪ್ರಶ್ನಿಸುವ ರಾಹುಲ್ ಗಾಂಧಿ ದೇಶಭಕ್ತಿಯನ್ನೇ ಪ್ರಶ್ನಿಸುವಂ ತಾಗಿದೆ. ಗಾಳಿಯಲ್ಲಿ ಗುಂಡು ಬಿಸಾಡಿದಂತೆ ವಿದೇಶದ ವೀಸಾ, ಪ್ರಭುತ್ವವಿಲ್ಲದೆ 3,500 ಕೋಟಿ ರೂ.ಗಳ ಹಣವನ್ನು ಇಡಲು ಅಕೌಂಟ್ ತೆರೆಯಲು ಹೇಗೆ ಸಾಧ್ಯ? ದಿನೇಶ್ ರೈ ಮಾತನಾಡಿ ಡಬಲ್ ಇಂಜಿನ್ ಸರಕಾರ ಬಡವರಿಗೆ  ಮನೆ ನಿರ್ಮಿಸಿಕೊಟ್ಟ ಇತಿಹಾಸವೇ ಇಲ್ಲ. ಆರ್ ಎಸ್ ಎಸ್ ನ ಮುಖಂಡರು ಭಾಷಣ ಮಾಡಿ ಮನೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಆದರೆ  ಪಾಪದ ಮನೆಮಂದಿಯನ್ನು ಜೈಲಿಗೆ ಹೋಗುವಂತೆ ಮಾಡು ತ್ತಾರೆ. ಜಿಲ್ಲೆಗೆ ಬಂದು ಟಾಟಾ ಮಾಡಿ ಹೋಗುವ ಪ್ರಧಾನಿ ಮೋದಿ, 40% ಕುರಿತು ಚಕಾರ ಎತ್ತುತ್ತಿಲ್ಲ ಎಂದರು.

ಈ ಸಂದರ್ಭ ಡಿಸಿಸಿ ವಕ್ತಾರ ಫಾರುಕ್ ಉಳ್ಳಾಲ, ದಿನೇಶ್ ರೈ, ಆಲ್ವಿನ್ ಡಿಸೋಜ, ಅಭಿಷೇಕ್ ಉಳ್ಳಾಲ್, ಸುರೇಶ್ ಭಟ್ನಗರ, ಆರ್ ಕೆ ಸಿ ಅಝೀಝ್, ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಈಶ್ವರ್ ಉಳ್ಳಾಲ್ ,ಭಾಸ್ಕರ್ ಕುತ್ತಾರ್, ವಿಲ್ಮಾ , ಮುನ್ನೂರು ಗ್ರಾ.ಪಂ ಸದಸ್ಯರುಗಳಾದ ನೌಷೀರ್, ಸಿರಾಜ್, ರೆಹನಾ ಬಾನು, ಪುಷ್ಪಾ,  ನವೀನ್ ಡಿಸೋಜ, ರೀಟಾ, ಸಿದ್ದೀಖ್ ಇಂಟೆಕ್, ರಘು ಶೆಟ್ಟಿ, ಹಮೀದ್,  ಉಪಸ್ಥಿತರಿದ್ದರು.
ಮುಸ್ತಾಫ ಮುನ್ನೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಸ್ತಾಫ ಮಲಾರ್ ನಿರೂಪಿಸಿ ವಂದಿಸಿದರು.

ಈ ಸಂದರ್ಭ ಮುನ್ನೂರು ವಲಯ ಹಾಗೂ ಪಂಡಿತ್ ಹೌಸ್ ಭಾಗದ ಬಿಜೆಪಿ ಕಾರ್ಯಕರ್ತರು ಹಾಗೂ ಎಸ್ ಡಿಪಿಐನ  ಕಾರ್ಯಕರ್ತರು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು‌.

Similar News