ಮೇ 9ರವರೆಗೆ ಗೋ ಫಸ್ಟ್ ವಿಮಾನಯಾನಗಳು ರದ್ದು
Update: 2023-05-04 23:16 IST
ಹೊಸದಿಲ್ಲಿ,ಮೇ 4: ಗೋ ಫಸ್ಟ್ ತನ್ನ ವಿಮಾನಯಾನಗಳ ರದ್ದತಿಯನ್ನು ಈಗ ಮೇ 9ರವರೆಗೆ ವಿಸ್ತರಿಸಿದೆ. ರದ್ದುಗೊಂಡಿರುವ ಯಾನಗಳಿಗಾಗಿ ಟಿಕೆಟ್ಗಳನ್ನು ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ನಿಯಮಗಳು ಅನುಮತಿಸಿರುವ ಕಾಲಮಿತಿಯೊಳಗೆ ಹಣವನ್ನು ಮರುಪಾವತಿಸುವಂತೆ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ದ ಮುಖ್ಯಸ್ಥ ವಿಕ್ರಮದೇವ ದತ್ತ ಅವರು ಗುರುವಾರ ಗೋ ಫಸ್ಟ್ಗೆ ಆದೇಶಿಸಿದ್ದಾರೆ.
ಮಂಗಳವಾರ ಸ್ವಯಂಪ್ರೇರಿತ ದಿವಾಳಿತನ ಅರ್ಜಿಯನ್ನು ಸಲ್ಲಿಸುವಾಗ ಗೋ ಫಸ್ಟ್ ಮೇ 3 ಮತ್ತು 4ರಂದು ತನ್ನ ಯಾನಗಳನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿತ್ತು. ಬಳಿಕ ಅದನ್ನು ಮೇ 5ಕ್ಕೆ ವಿಸ್ತರಿಸಿತ್ತು. ಇದೀಗ ಯಾನಗಳ ರದ್ದತಿಯನ್ನು ಮುಂದಿನ ಮಂಗಳವಾರದವರೆಗೆ ವಿಸ್ತರಿಸಿದೆ. ಸಂಸ್ಥೆಯು ಮೇ 15ರವರೆಗೆ ಯಾನಗಳಿಗಾಗಿ ಹೊಸದಾಗಿ ಟಿಕೆಟ್ಗಳ ಮಾರಾಟವನ್ನು ನಿಲ್ಲಿಸಿದೆ.