×
Ad

ಎಸೆಸೆಲ್ಸಿ ಪರೀಕ್ಷೆ: ಹೂಡೆಯ ಸಾಲಿಹಾತ್‌ಗೆ ಉತ್ತಮ ಫಲಿತಾಂಶ

Update: 2023-05-08 17:04 IST

ಉಡುಪಿ, ಮೇ 8: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ಉತ್ತಮ ಫಲಿತಾಂಶ ದಾಖಲಿಸಿದೆ.

ಆರು ವಿದ್ಯಾರ್ಥಿಯರು ಉನ್ನತ ಶ್ರೇಣಿಯಲ್ಲಿ, 43 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಹಾಗೂ 11 ವಿಧ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ. ಸಮನ್ ಸಾನಿಯ 625ರಲ್ಲಿ 589(94.24%) ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಅದೇ ರೀತಿ ಸಲ್ಮಾ ಝೈನಾಬ್ 568 (ಶೇ.90.88), ರಾಹೀಲಾ ಮುಸ್ಕಾನ್ 561(ಶೇ.89.76), ಅಝಾ ಖುರ‌್ರಮ್ 552 (ಶೇ.88.32), ಸನ್ಹಾ 541(ಶೇ.86.56), ಸುಹಾ ಮದಿಹಾ 538 (ಶೇ.86.08) ಅಂಕಗಳನ್ನು ಪಡೆದಿದ್ದಾರೆ. ಈ ಉತ್ತಮ ಫಲಿತಾಂಶಕ್ಕಾಗಿ ಆಡಳಿತ ಮಂಡಳಿ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

Similar News