ದ.ಕ.ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ಪೂರ್ಣ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬುಧವಾರ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಸಂಜೆಯ ವೇಳೆಗೆ ಮಸ್ಟರಿಂಗ್ ಕಾರ್ಯ ಪೂರ್ಣಗೊಂಡಿವೆ.
ಪ್ರತೀ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸಹಿತ ಐವರು ಸಿಬ್ಬಂದಿಗಳಿರುತ್ತಾರೆ. ಅಲ್ಲದೆ ಶೇ. 20ರಷ್ಟು ಮೀಸಲು ಸಿಬ್ಬಂದಿಯೂ ಇರುತ್ತಾರೆ.
ಮಂಗಳವಾರ ಬೆಳಗ್ಗೆ ಪ್ರತೀ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖ ಆಯಾ ಮಸ್ಟರಿಂಗ್ ಕೇಂದ್ರದಲ್ಲಿರುವ ಭದ್ರತಾ ಕೊಠಡಿಯನ್ನು ತೆರೆಯಲಾಯಿತು. ಅಲ್ಲಿಂದ ಇವಿಎಂಗಳನ್ನು ಮಸ್ಟರಿಂಗ್ ಕೇಂದ್ರದ ನಿಗದಿತ ಕೊಠಡಿಯಲ್ಲಿ ಆಯಾ ಮತಗಟ್ಟೆ ಅಧಿಕಾರಿಗಳಿಗೆ ವಿತರೊಸಲಾಯಿತು. ಮಧ್ಯಾಹ್ನದ ಬಳಿಕ ನಿಗದಿತ ರೂಟ್‌ನ ಬಸ್‌ಗಳಲ್ಲಿ ಮತಗಟ್ಟೆ ಅಧಿಕಾರಿ/ಸಿಬ್ಬಂದಿಯು ತೆರಳಿದರು. ಈ ಮಧ್ಯೆ ಅಧಿಕಾರಿ/ಸಿಬ್ಬಂದಿಯು ಮತಗಟ್ಟೆ ತಲುಪಿದ್ದಾರೆಯೇ ಎಂದು ಖಚಿತಪಡಿಸುವ ಪ್ರಕ್ರಿಯೆಯು ಕೂಡ ಸೆಕ್ಟರ್ ಅಧಿಕಾರಿಗಳಿಂದ ನಡೆಯಿತು.
ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್‌ಬ್ಯಾಗ್‌ಗಳನ್ನು ವಿತರಿಸಲು ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಈ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳ ಲಾಯಿತು. ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಮಸ್ಟರಿಂಗ್ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಯಿತು.