ಕಿದಿಯೂರು ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಸಾಮೂಹಿಕ ಪಠಣ
Update: 2023-05-09 19:12 IST
ಉಡುಪಿ, ಮೇ 9: ಬಿಜೆಪಿ ಮಹಾ ಶಕ್ತಿ ಕೇಂದ್ರ ಅಂಬಲಪಾಡಿ-ಕಡೆಕಾರು ಇದರ ವತಿಯಿಂದ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಿದಿಯೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಸಾಮೂಹಿಕ ಪಠಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಿಜೆಪಿ ಮಹಾ ಶಕ್ತಿಕೇಂದ್ರ ಅಂಬಲಪಾಡಿ-ಕಡೆಕಾರು ಇದರ ಸಂಚಾಲಕ ರಾಜೇಂದ್ರ ಪಂದುಬೆಟ್ಟು, ಜಿಲ್ಲಾ ಒಬಿಸಿ ಮೋರ್ಚಾದ ಕಾರ್ಯ ಕಾರಿಣಿ ಸದಸ್ಯ ಹರೀಶ್ ಆಚಾರ್ಯ, ಉಡುಪಿ ನಗರ ಪಂಚಾಯತ್ ರಾಜ್ ಪ್ರಕೋಷ್ಠದ ಸಹ ಸಂಚಾಲಕ ಗಿರೀಶ್ ಅಮೀನ್ ಕಿದಿಯೂರು, ಅಂಬಲಪಾಡಿ ಗ್ರಾಪಂ ಸದಸ್ಯರಾದ ರಾಜೇಶ್ ಸುವರ್ಣ, ಶಶಿಧರ್ ಸುವರ್ಣ, ಉಷಾ ಶೆಟ್ಟಿ, ಪ್ರಮುಖ ರಾದ ಗೋವಿಂದ ಪಾಲನ್ ಪಂದುಬೆಟ್ಟು, ವಿವೇಕ್ ಕಿದಿಯೂರು, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.