×
Ad

ಸ್ಕಿಲ್-ಎ-ಥೈನ್ ಸ್ಪರ್ಧೆಯಲ್ಲಿ ಎಂಐಟಿಕೆ ರಾಜ್ಯಕ್ಕೆ ಪ್ರಥಮ

Update: 2023-05-09 19:16 IST

ಕುಂದಾಪುರ, ಮೇ 9: ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳ ತಂಡವು ಯು.ಐ. ಪಾಥ್ ನಡೆಸಿದ ಸ್ಕಿಲ್-ಎ-ಥೋನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ ಆರನೇಯ ಸ್ಥಾನವನ್ನು ಪಡೆದಿದೆ.

ಈ ಸ್ಪರ್ಧೆಯು ರೊಬೋಟಿಕ್ ಯಾಂತ್ರೀಕರಣ ಪ್ರಕ್ರೀಯೆ ಪೌರತ್ವದಲ್ಲಿ ಉತ್ತಮ ಸಾಧನೆ ಮಾಡುವ ಸಂಸ್ಥೆಗಳನ್ನು ಗುರುತಿಸುವ ಗುರಿಹೊಂದಿದೆ. ಎಂಐಟಿ ಕುಂದಾಪುರ ತಂಡ 200 ಬಾಟ್‌ಗಳನ್ನು ನಿರ್ಮಿಸಿ ಈ ಸ್ಪರ್ಧೆಯಲ್ಲಿ ಜಯಗಳಿಸಿದೆ.

ಸ್ಕಿಲ್-ಎ-ಥಾನ್ 2022 ಸ್ಪರ್ಧೆಯು ನಾಗರಿಕ ಡೆವೆಲಪರ್‌ರನ್ನು ಸೃಷ್ಟಿಸಿ, ಡಿಜಿಟಲ್ ಸಹಾಯಕರಾಗಿ ಸಾಮಾನ್ಯ ರೋಬೋಟಗಳ ಸಾಮರ್ಥ್ಯವನ್ನು ತಿಳಿಯುವುದಾಗಿದೆ. ಮೊದಲನೇ ಹಾಗೂ ಎರಡನೇ ವರ್ಷದ ಇಂಜಿನಿಯ ರಿಂಗ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸ ಲಾಗಿತ್ತು.

ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಹಾಗೂ ಉಪಪ್ರಾಂಶುಪಾಲ ಡಾ. ಮೆಲ್ವಿನ್ ಡಿಸೋಜ ಐಸಿಟಿ ಅಕಾಡೆಮಿಯ ವಿಘ್ನೇಶ ಶೆಟ್ಟಿಯವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಅಧ್ಯಾಪಕ ಪ್ರೊ.ಅಮೃತಮಾಲಾ, ಪ್ರೊ.ಅಕ್ಷತಾ, ಪ್ರೊ. ಮನೋಜ್ ಕುಮಾರ್ ಮತ್ತು ಎರಡನೇ ವರ್ಷದ ಎಐ ಆಂಡ್ ಎಂಎಲ್ ವಿಭಾಗದ ವಿದ್ಯಾರ್ಥಿಗಳಾದ ಸಿಬಿ ಸಭಾಸ್ಟಿನ್ ಮತ್ತು ಮೇಘನಾ ಈ ಸ್ಪರ್ಧೆಗೆ ಸಹಕರಿಸಿದ್ದರು.

Similar News