×
Ad

ಅನಧಿಕೃತ ಭೇಟಿ ನೀಡದಂತೆ ರಾಹುಲ್ ಗಾಂಧಿಗೆ ನೋಟಿಸ್ ನೀಡಲು ಮುಂದಾದ ದಿಲ್ಲಿ ವಿವಿ

Update: 2023-05-09 23:21 IST

ಹೊಸದಿಲ್ಲಿ: ವಿಶ್ವವಿದ್ಯಾನಿಲಯದ ಆವರಣಕ್ಕೆ ಅನಧಿಕೃತವಾಗಿ ಭೇಟಿ ನೀಡಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಲ್ಲಿ ವಿವಿ ನೋಟಿಸ್ ನೀಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂತಹ ಭೇಟಿಗಳು ವಿದ್ಯಾರ್ಥಿಗಳಿಗೆ ಅಪಾಯಕಾರಿಯಾಗಲಿದ್ದು, ಹಾಗಾಗಿ ಸೂಕ್ತ ನಿಯಮಾವಳಿ ಪಾಲಿಸುವುದು ಅಗತ್ಯ ಎಂದು ಅವರಿಗೆ ನೋಟಿಸ್ ನೀಡುವುದಾಗಿ ವಿವಿ ರಿಜಿಸ್ಟ್ರಾರ್ ವಿಕಾಸ್ ಗುಪ್ತಾ ತಿಳಿಸಿದ್ದಾರೆ.

ಶುಕ್ರವಾರ ವಿವಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದ ರಾಹುಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಊಟ ಮಾಡಿದ್ದರು.

'ರಾಹುಲ್ ಗಾಂಧಿ ಅನಧಿಕೃತ ಭೇಟಿ ವೇಳೆ ಹಲವು ವಿದ್ಯಾರ್ಥಿಗಳು ಅವರೊಂದಿಗೆ ಊಟ ಮಾಡಿದ್ದರು. ನಮ್ಮ ಕ್ಯಾಂಪಸ್‌ನಲ್ಲಿ ಇದನ್ನು ಸಹಿಸುವುದಿಲ್ಲ. ಇಂತಹ ನಡೆಯನ್ನು ಪುನರಾವರ್ತಿಸದಂತೆ ಅವರಿಗೆ ನೋಟಿಸ್‌ ನೀಡಲಾಗುವುದು' ಎಂದು ಗುಪ್ತಾ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಎನ್‌ಎಸ್‌ಯುಐ ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿದೆ. ರಾಹುಲ್‌ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಆಡಳಿತಕ್ಕೆ ಒತ್ತಡವಿದೆ ಎಂದು ಆರೋಪಿಸಿದೆ.

Similar News