ತೆಂಕ ಎಡಪದವು ಬೂತ್ ನಲ್ಲಿ ಮೊದಲಿಗರಾಗಿ ಮತ ಚಲಾಯಿಸಿದ ರಾಜೇಶ್ ನಾಯ್ಕ್
Update: 2023-05-10 15:26 IST
ಬಂಟ್ವಾಳ, ಮೇ 10: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ತೆಂಕ ಎಡಪದವಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂಖ್ಯೆ 186ರಲ್ಲಿ ಮೊದಲಿಗರಾಗಿ ಮತ ಚಲಾಯಿಸಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೆಂಕ ಎಡಪದವಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಮತಗಟ್ಟೆ ಸಂಖ್ಯೆ 186ರಲ್ಲಿ ಬೆಳಗ್ಗೆ 6:30ಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದ ರಾಜೇಶ್ ನಾಯ್ಕ್ ಬೂತ್ ನಲ್ಲಿ ಮೊದಲಿಗರಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.